ADVERTISEMENT

ಕಳೆಯಿಲ್ಲದ ಲೋಸಾರ ಹಬ್ಬ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 9:55 IST
Last Updated 22 ಫೆಬ್ರುವರಿ 2012, 9:55 IST

ಮುಂಡಗೋಡ: ಟಿಬೇಟಿನ ಸ್ವಾತಂತ್ರ್ಯ ಕ್ಕಾಗಿ ಯುವಕರು ಆತ್ಮಹತ್ಯೆಗೆ ಶರಣಾ ಗುತ್ತಿರುವ ಕರಿನೆರಳಿನ ನಡುವೆ  ಟಿಬೇಟಿಯನ್ನರ ಹೊಸ ವರ್ಷದ ಹಬ್ಬವಾದ `ಲೋಸಾರ~ ಇಂದಿನಿಂದ (ಫೆ.22) ಪ್ರಾರಂಭವಾಗಲಿದ್ದು ಹಬ್ಬದ ಸಡಗರ ಕಳೆಗುಂದಿದಂತೆ ಕಾಣುತ್ತಿದೆ. 

 ಚೀನಾ ಸೈನಿಕರ ದಬ್ಬಾಳಿಕೆಯನ್ನು ಖಂಡಿಸಿರುವ ಇಲ್ಲಿನ ಟಿಬೇಟನ್‌ರು ಹಬ್ಬವನ್ನು ಸಡಗರದಿಂದ ಆಚರಿಸ ದಂತೆ ತೀರ್ಮಾನಿಸಿದ್ದು ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳು ಜರು ಗಲಿವೆ.

ಹಬ್ಬದ ಹಿನ್ನೆಲೆ: ಟಿಬೇಟಿಯನ್ನರು ಪೂರ್ವದಲ್ಲಿ `ಬಾನ್~ ಧರ್ಮವನ್ನು ಅನುಸರಿಸುತ್ತಿದ್ದ ಸಂದರ್ಭದಲ್ಲಿ ಚಳಿ ಗಾಲದ ಧಾರ್ಮಿಕ ಸಮಾರಂಭವನ್ನು ಆಯೋಜಿಸುತಿದ್ದರು. ಈ ಸಂದರ್ಭ ದಲ್ಲಿ ಸ್ಥಳಿಯ ದೇವ, ದೇವತೆಗಳ ಸಂತುಷ್ಠಿಗಾಗಿ ಧೂಪ, ಹವನಗಳನ್ನು ಅರ್ಪಿಸುತ್ತಿದ್ದರು. ಇದೆ ಮುಂದೆ ಟಿಬೇಟನ್ 9ನೇ ಅರಸನ ಕಾಲದಲ್ಲಿ ವಾರ್ಷಿಕ ಬೌಧ್ದ ಹಬ್ಬವಾಗಿ ಪರಿ ವರ್ತನೆಗೊಂಡಿತು ಎನ್ನಲಾಗಿದೆ.

`ಬೆಲಮಾ~ಎಂಬ ವೃದ್ಧ ಮಹಿಳೆ ಚಂದ್ರನ ಚಲನೆಯನ್ನು ಆಧರಿಸಿ ಕಾಲಗಣನೆ ಪದ್ದತಿ ಆಚರಣೆಗೆ ತಂದಾಗ ಈ `ಲೋಸಾರ~ ಹಬ್ಬ ಆರಂಭವಾಯಿ ತೆಂದು ಹೇಳಲಾಗುತ್ತದೆ. `ಲೊಕ ಯಾರ್ಲಾ ಶಾಂಪೋ~ ಪ್ರದೇಶದಲ್ಲಿ ಶರದ ಋತುವಿನಲ್ಲಿ ಜರದಾಲು ಗಿಡ(ದ್ರಾಕ್ಷಿ ಜಾತಿಗೆ ಸೇರಿದ ಗಿಡ) ಹೂ ಬಿಡುವ ಸಂದರ್ಭದಲ್ಲಿ ಈ ಹಬ್ಬ ಬರುತ್ತದೆ. ಮೊದಲಿಗೆ ರೈತರು ಇದನ್ನು ಸುಗ್ಗಿ ಹಬ್ಬದಂತೆ ಆಚರಿಸುತ್ತಿದ್ದರು. ನಂತರ ಪಂಚಾಂಗ ಆಧರಿಸಿ ಜ್ಯೋತಿಷ್ಯ ಶಾಸ್ತ್ರವನ್ನು ಆಚರಣೆಗೆ ತಂದಾಗ ಇದೇ ಸುಗ್ಗಿ ಹಬ್ಬವನ್ನು `ಲೋಸಾರ~ ಅಥವಾ ಹೊಸ ವರ್ಷದ ಹಬ್ಬವೆಂದು ಕರೆಯಲ್ಪಟ್ಟಿತು ಎನ್ನಲಾಗಿದೆ.

ಹುರಿದ ಬಾರ್ಲಿ ಹಿಟ್ಟು, ಒಣ ಗೆಣಸು, ಮೊಳಕೆಯೊಡೆದ ಗೋಧಿ ಅಥವಾ ಬಾರ್ಲಿ ಧಾನ್ಯದಿಂದ ಮಾಡಿದ ಚಾಂಗ್, ಚಹ, ಬೆಣ್ಣೆ, ವಿವಿಧ ಗಾತ್ರದ ಬಿಸ್ಕತ್ತುಗಳು, ಹಣ್ಣು ಹಾಗೂ ಸ್ಥಳೀಯವಾಗಿ ಬೆಳೆಯುವ ಆಹಾರ ಪದಾರ್ಥಗಳ ಸಂಗ್ರಹದೊಡನೆ ಹಬ್ಬದ ತಯಾರಿ ಪ್ರಾರಂಭವಾಗು ತ್ತದೆ. ರೊಟ್ಟಿ ಹಾಗೂ ಕರಿದ `ಖಾಬ್ಸೆ~ ಎಂಬ ಬಿಸ್ಕಿಟ್‌ನ್ನು ಹಬ್ಬದ ಎರಡು ದಿನ ಮೊದಲೆ ತಯಾರಿಸಲು ಟಿಬೇಟನ್‌ರು ತೊಡಗುವರು.

ಲೋಸಾರ ಹಬ್ಬದ ಮೊದಲ ದಿನ ನಸುಕಿನಲ್ಲಿ ಮನೆಯ ಗೃಹಿಣಿಯು ವರ್ಷದ ಮೊದಲ ನೀರು ಸಂಗ್ರಹಿಸಲು ಪಾತ್ರೆ (ಬಿಂದಿಗೆ) ತೆಗೆದುಕೊಂಡು ನೀರಿನ ಸೆಲೆಯ ಸ್ಥಳದಲ್ಲಿ ಅಥವಾ  ನಲ್ಲಿಯ ಸುತ್ತಲೂ ಬಿಳಿಯ ಸ್ಕಾರ್ಪನ್ನು ಸುತ್ತಿ ನಾಗದೇವತೆಯ ಸಂಪ್ರೀತಿಗಾಗಿ ಬಾರ್ಲಿ ಹಿಟ್ಟು ಮತ್ತು ಚಾಂಗನ್ನು ಅರ್ಪಿಸುವಳು.

ಮನೆ ಮಂದಿ ತಮ್ಮ ಧಾರ್ಮಿಕ ಉಡುಗೆಯೊಂದಿಗೆ ಪೂಜೆಯಲ್ಲಿ ತೊಡಗುವರು. ನಂತರ ನೆರೆಹೊರೆಯ ವರಲ್ಲಿ ಹಬ್ಬದ ಶುಭಾಷಯ ವಿನಿ ಮಯ ಮಾಡಿಕೊಳ್ಳುವರು. ಹಬ್ಬದ ಮೊದಲನೆಯ ದಿನವನ್ನು `ಲಾಮಾ ಲೋಸಾರ~, ಎರಡನೆಯ ದಿನವನ್ನು `ಕಿಂಗ್ಸ್ ಲೋಸಾರ~ ಎಂದು ಕರೆಯು ವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.