ADVERTISEMENT

‘ಕೃಷಿ ಸಾಲ ಪಡೆಯುವವರ ಸಂಖ್ಯೆ ಇಳಿಕೆ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 5:38 IST
Last Updated 22 ಡಿಸೆಂಬರ್ 2017, 5:38 IST

ಉಡುಪಿ: ‘ಜಿಲ್ಲೆಯಲ್ಲಿ ಕೃಷಿ ಸಾಲ ಪಡೆಯುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಫ್ರಾನ್ಸಿಸ್ ಬೋರ್ಜಿಯಾ ಹೇಳಿದರು. ಗುರುವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಮಿತಿ ಎರಡನೇ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಭತ್ತದ ಬೇಸಾಯವನ್ನು ಮಾಡುವವರು ಪ್ರಮಾಣ ಕಡಿಮೆಯಾಗಿದೆ. ಕೃಷಿ ಅಗತ್ಯವಿರುವ ಯಂತ್ರೋಪಕರಣ ಬಾಡಿಗೆ ಮೂಲಕ ಪಡೆಯುತ್ತಿರುವುದು ಕೃಷಿ ಸಾಲ ಪಡೆಯುವವರ ಸಂಖ್ಯೆ ಕಡಿಮೆಯಾಗಲು ಇದೂ ಒಂದು ಕಾರಣ ಎಂದರು.

ಬ್ಯಾಂಕ್‌ಗಳ ಪ್ರಗತಿಯ ಅಂಕಿ ಅಂಶಗಳನ್ನು ಮಂಡಿಸಿದ ಸಿಂಡಿಕೇಟ್‌ ಬ್ಯಾಂಕಿನ ಉಡುಪಿ ವಿಭಾಗೀಯ ಕಚೇರಿಯ ಪ್ರಬಂಧಕ ಎಸ್. ಎಸ್. ಹೆಗಡೆ ಮತನಾಡಿ, ಜಿಲ್ಲೆಯ ಬ್ಯಾಂಕ್‌ಗಳು 2017 ಡಿಸೆಂಬರ್‌ ಅಂತ್ಯಕ್ಕೆ ₹ 21,530 ಕೋಟಿ ಠೇವಣಿ ಹಾಗೂ ₹10,730 ಕೋಟಿ ಮುಂಗಡವನ್ನು ಹೊಂದಿವೆ. ವಾರ್ಷಿಕವಾಗಿ ಠೇವಣಿಯಲ್ಲಿ ಶೇ13.54 ಮತ್ತು ಮುಂಗಡದಲ್ಲಿ ಶೇ 8.68ರಷ್ಟು ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು.

ADVERTISEMENT

ಎರಡನೇ ತ್ರೈಮಾಸಿಕ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್‌ಗಳು ₹ 3,667 ಕೋಟಿ ಸಾಲ ನೀಡಿದು, ಈ ಅವಧಿಯ ವಾರ್ಷಿಕ ಗುರಿ ₹ 7,340 ಕೋಟಿಯ ಶೇ. 50 ರಷ್ಟು ಪ್ರಗತಿ ಸಾಧಿಸಿದೆ. ಜಿಲ್ಲೆಯ ಬ್ಯಾಂಕ್‌ಗಳು ₹1,337 ಕೋಟಿ ಕೃಷಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ ₹ 911 ಕೋಟಿ, ಶೈಕ್ಷಣಿಕ ₹43.11 ಕೋಟಿ, ಗೃಹ ಸಾಲ ₹219 ಕೋಟಿ ನೀಡಲಾಗಿದೆ ಎಂದು ಅವರು ಹೇಳಿದರು. ನಬಾರ್ಡ್‌ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್‌. ರಮೇಶ್‌, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.