ADVERTISEMENT

ಚಲನಚಿತ್ರದಲ್ಲಿ ವಿಶೇಷ ತಂತ್ರಜ್ಞಾನ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:10 IST
Last Updated 3 ಅಕ್ಟೋಬರ್ 2011, 6:10 IST

ಸಿದ್ದಾಪುರ: `ಚಲನಚಿತ್ರಗಳಲ್ಲಿ ತಂತ್ರವೇ ಪ್ರೇಕ್ಷಕರನ್ನು ಮೈಮರೆಸುವ  ಸಾಧನ ವಾಗಕೂಡದು~ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ನುಡಿದರು.ಪಟ್ಟಣದ ಶಂಕರಮಠದಲ್ಲಿ ಸ್ಥಳೀಯ ಸಂಸ್ಕೃತಿ ಸಂಪದ, ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ, ತಾಲ್ಲೂಕಿನ ರಂಗ ಸೌಗಂಧ ಮತ್ತು ಒಡ್ಡೋಲಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರಗಳ ಚಲನಚಿತ್ರೋತ್ಸವದ ಕೊನೆಯ ದಿನವಾದ ಶನಿವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

`ಈಗ ಬಳಕೆಯಾಗುತ್ತಿರುವ ತಂತ್ರ ಪ್ರೇಕ್ಷಕನ್ನು ದಂಗಾಗಿಸುತ್ತದೆ. ಹಾಲಿವುಡ್ ಚಿತ್ರಗಳಲ್ಲಿ ಬಳಕೆಯಾಗು ತ್ತಿರುವ ಗ್ರಾಫಿಕ್ ಈ ರೀತಿ ದಂಗು ಬಡಿಸುವ ಕೆಲಸ ಮಾಡುತ್ತಿದೆ.

ಇದು ಅಪಾಯಕಾರಿ. ಹೊಸ ಹೊಸ ತಂತ್ರಗಳ ಮೂಲಕ ಪ್ರೇಕ್ಷಕನನ್ನು ಮೈಮರೆಸು ವುದಕ್ಕೆ ಆಕ್ಷೇಪವಿದೆ. ಚಲನಚಿತ್ರಗಳಲ್ಲಿ ತಂತ್ರ ಅಥವಾ ತಾಂತ್ರಿಕತೆ ಪ್ರೇಕ್ಷಕನ್ನು ಎಚ್ಚರಿಸುವ ಕೆಲಸ ಮಾಡಬೇಕು~ ಎಂದರು.
 
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಡಾ.ಶ್ರೀಧರ ಬಳಗಾರ, `ಕಾಸರವಳ್ಳಿ ಅವರ ಚಿತ್ರಗಳಲ್ಲಿ ಹಿಂಸೆಯ ಮೀಮಾಂಸೆಯಿದೆ. ಅದು ನಮ್ಮಳಗೆ ಇದ್ದುದಾಗಿರಬಹುದು . ಇದನ್ನು ಹೇಳುವ ಸಂದರ್ಭದಲ್ಲಿ ಸ್ತ್ರೀ ಸಂವೇದನೆಯ ಮರುಪರಿಶೀಲನೆ ಅವರಿಂದ ನಡೆಯುತ್ತದೆ~ ಎಂದರು.
  
ಶಿವಮೊಗ್ಗದ ಲೇಖಕ ಎಂ.ಎನ್.ನಾಗರಾಜರಾವ್ ಮಾತನಾಡಿದರು. ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ರಂಗಕರ್ಮಿ ಪುರುಷೋತ್ತಮ ತಲವಾಟ, ವಿ.ಸುಬ್ಬಣ್ಣ ಆಪ್ತ ಸಮೂಹದ ಗೋಪಿನಾಥ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.