ADVERTISEMENT

‘ಚುನಾವಣೆಯಲ್ಲಿ ಸ್ಥಳೀಯ ಸಂಸ್ಕತಿ ಮುಖ್ಯವಾಗಲಿ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 10:06 IST
Last Updated 5 ಮಾರ್ಚ್ 2018, 10:06 IST

ಅಂಕೋಲಾ: ‘ವಿಧಾನಸಭಾ ಕ್ಷೇತ್ರದಲ್ಲಿ ಬಳ್ಳಾರಿ ಸಂಸ್ಕೃತಿ ಬೇಡ. ಸ್ಥಳೀಯ ಸಂಸ್ಕೃತಿ ಬರಲಿ. ಬಿಪಿಎಲ್ ಕಾರ್ಡ್‌ದಾರ ಕೂಡ ಚುನಾವಣೆಗೆ ಸ್ಪರ್ಧಿಸುವಂತಾಗಬೇಕು. ಸಮಾಜ ಸೇವಕನಿಗೆ ಜನನಾಯಕನಾಗುವ ಅವಕಾಶ ದೊರೆಯಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಳೆದ ಮೂರು ಚುನಾವಣೆಯಲ್ಲಿ ಯೋಗ್ಯ ನಾಯಕರ ಆಯ್ಕೆಗಾಗಿ ದುಡಿದಿದ್ದೇನೆ. ನಮ್ಮ ನಿರೀಕ್ಷೆಗೆ ಸರಿಯಾದ ಜನಪ್ರತಿನಿಧಿಗಳು ದೊರೆತಿಲ್ಲ. ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ಹಿತೈಷಿಗಳು ಒತ್ತಾಯಿಸುತ್ತಿದ್ದಾರೆ. ಅವರ ಮಾತುಗಳಿಗೆ ಗೌರವ ನೀಡಿ ಮಾರ್ಚ್ 11ರಂದು ಅಂಕೋಲಾದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ನಿರೀಕ್ಷೆ ಮಾಡುತ್ತಿದ್ದೇನೆ. ಒಂದುವೇಳೆ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುವುದು. ಕೇವಲ ಹಣ ಹೆಂಡದಿಂದ ಚುನಾವಣೆ ಗೆಲ್ಲುವುದಲ್ಲ. ಸಮಾಜ ಸೇವೆಯಿಂದ ಕೂಡ ಸಾಧ್ಯ ಎಂಬುದನ್ನು ಸಾಬೀತು ಮಾಡಲು ಈ ಸ್ಪರ್ಧೆಗೆ ಮುಂದಾಗುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇನೆ’ ಎಂದು ಹೇಳಿದರು.

ಸಾಹಿತಿ ಆರ್.ಜಿ.ಗುಂದಿ, ಗಣಪತಿ ಓಮು ನಾಯ್ಕ, ಸುರೇಶ ವಿ.ನಾಯ್ಕ, ರಾಜೀವ ನಾಯ್ಕ, ಕಾರ್ತಿಕ ನಾಯ್ಕ, ಶಿವಾನಂದ ನಾಯ್ಕ, ವಿಜಯಕುಮಾರ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.