
ಹಳಿಯಾಳ: ತಾಲ್ಲೂಕಿನ ಮುರ್ಕವಾಡ ಗ್ರಾಮದಲ್ಲಿ ರಾಜ್ಯದ ಬೃಹತ್ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ  ಅವರು  ವಾರದ ಸಂತೆಯ ಮಾರುಕಟ್ಟೆಯಲ್ಲಿ ಶುಕ್ರವಾರ ತರಕಾರಿ ತರಕಾರಿ ಖರೀದಿಸಿದರು.
 
 ಮುರ್ಕವಾಡ ಗ್ರಾಮ ಪಂಚಾಯ್ತಿಯಲ್ಲಿ ನೂತನವಾಗಿ ಆಳವಡಿಸಲಾದ ಬಾಪೂಜಿ ಸೇವಾ ಕೇಂದ್ರ ಉದ್ಘಾಟಿಸಿದ ನಂತರ ಸಭಾ ಕಾರ್ಯಕ್ರಮಕ್ಕೆ ತೆರಳುವ ಮುನ್ನ ವಾರದ ಸಂತೆ ಮೂಲಕ  ಮುಖ್ಯ ಬೀದಿಯಿಂದ ತೆರಳುವಾಗ ಸಂತೆಗೆ ಭೇಟಿ ನೀಡಿದರು.
 
  ರೈತರು ಬೆಳೆದ ತರಕಾರಿಗಳು, ಧಾನ್ಯದ ಬೆಲೆ ವಿಚಾರಿಸಿದ ಅವರು ಬೆಳೆಗೆ ಸೂಕ್ತ ಬೆಲೆ ಸಿಗುತ್ತಿದೆಯೇ ಎಂದು ಮಾಹಿತಿ ಪಡೆದರು. ಈ ವೇಳೆ ಅವರು ತರಕಾರಿ  ಖರೀದಿಸಿದರು. ಇದೇ ಸಂದರ್ಭದಲ್ಲಿ  ಮಾರಾಟಗಾರರ ಹಾಗೂ ರೈತರೊಂದಿಗೆ ತೋಟಗಾರಿಕೆ ಬೆಳೆಗಳ ಕುರಿತು ಕೆಲ ಹೊತ್ತು ಸಂವಾದ ನಡೆಸಿ ನೂತನ ಹಾಗೂ ಸುಲಭ ಆಧುನಿಕ ತಂತ್ರಜ್ಞಾನ ಅಳವಡಿಸಿ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆ ಹೆಚ್ಚು ಹೆಚ್ಚು ಬೆಳೆಸಿ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.