ADVERTISEMENT

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ: ವಿವಸ್ತ್ರನಾಗಿ ರಂಪಾಟ

ಜಿಲ್ಲಾ ಆಸ್ಪತ್ರೆಗೆ ವ್ಯಕ್ತಿ ದಾಖಲು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 6:15 IST
Last Updated 29 ಮಾರ್ಚ್ 2018, 6:15 IST
ಕಾರವಾರದಲ್ಲಿ ಕಾಳಿ ನದಿಗೆ ಇಳಿಯಲು ಯತ್ನಿಸುತ್ತಿರುವ ಶಂಕರ ಬಂಜಾರ
ಕಾರವಾರದಲ್ಲಿ ಕಾಳಿ ನದಿಗೆ ಇಳಿಯಲು ಯತ್ನಿಸುತ್ತಿರುವ ಶಂಕರ ಬಂಜಾರ   

ಕಾರವಾರ: ತನ್ನ ಒಂದು ವರ್ಷದ ಗಂಡು ಮಗುವನ್ನು ಇಲ್ಲಿನ ಕಾಳಿನದಿಗೆ ಎಸೆದು, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್‌ನ ಗಾರೆ ಕೆಲಸಗಾರ ಶಂಕರ ಬಂಜಾರ (40) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಮಂಗಳವಾರ ರಾತ್ರಿ ಮಗುವಿನೊಂದಿಗೆ ನದಿಗೆ ಹಾರಿದ್ದ ಈತನನ್ನು ಹಾಗೂ ಮಗುವನ್ನು ದೇವಬಾಗ್ ಬೀಚ್ ರೆಸಾರ್ಟ್ ಸಿಬ್ಬಂದಿ ರಕ್ಷಿಸಿ, ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಬುಧವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ರಂಪಾಟ ಮಾಡಿ, ಸಿಬ್ಬಂದಿಯಿಂದ ತಪ್ಪಿಸಿಕೊಂಡು ವಿವಸ್ತ್ರನಾಗಿ ರಸ್ತೆಯಲ್ಲಿ ಓಡಿಬಂದಿದ್ದಾನೆ. ಪುನಃ ನದಿಗೆ ಹಾರಿ ಸುಮಾರು ಅರ್ಧ ಕಿಲೋಮೀಟರ್‌ನಷ್ಟು ದೂರದಲ್ಲಿರುವ ಮತ್ತೊಂದು ದಡಕ್ಕೆ ಈಜಿಕೊಂಡು ಹೋಗಿದ್ದಾನೆ. ಅಲ್ಲಿಂದ ಮತ್ತೆ ನದಿಗೆ ಜಿಗಿದ ಶಂಕರ, ಈಜುತ್ತ  ಬಂದು ನದಿಯ ಮಧ್ಯಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಯ ಕಂಬದ ಕಟ್ಟೆಯಲ್ಲಿ ಕುಳಿತುಕೊಂಡಿದ್ದಾನೆ. ಸ್ಥಳೀಯರು ಎಷ್ಟೇ ಕೂಗಿ ಕರೆದರೂ ವಾಪಸ್ ಬರಲು ಒಪ್ಪಲಿಲ್ಲ. ಬದಲಾಗಿ ಗುಪ್ತಾಂಗಕ್ಕೆ ದಾರ ಬಿಗಿದುಕೊಂಡು ಮತ್ತೆ ನದಿಗೆ ಹಾರಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ADVERTISEMENT

ಈತನ ರಂಪಾಟದಿಂದ ಕಂಗೆಟ್ಟ ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದರು. ಆಗ ಅವರು ಅವನನ್ನು ರಕ್ಷಿಸಿ ದೋಣಿಯ ಮೂಲಕ ದಡಕ್ಕೆ ಕರೆತಂದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.

ವೈದ್ಯರು, ಈತನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲು ಶಿಫಾರಸು ಮಾಡಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು. ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.