ADVERTISEMENT

ನಿರಾಶೆಯ ಬಜೆಟ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 10:05 IST
Last Updated 15 ಮಾರ್ಚ್ 2012, 10:05 IST

ಕಾರವಾರ: ರೈಲ್ವೆ ಸಚಿವ ದಿನೇಶ ತ್ರಿವೇದಿ ಬುಧವಾರ ಲೋಕಸಭೆಯಲ್ಲಿ ಮಂಡಿಸಿದ ರೈಲ್ವೆ ಬಜೆಟ್ ಜಿಲ್ಲೆಯ ಜನರಲ್ಲಿ ಮತ್ತೆ ನಿರಾಶೆಗೆ ಕಾರಣವಾಗಿದೆ. ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವ ಮಾಡದಿದ್ದರೆ ಜಿಲ್ಲೆಯ ಜನತೆ ಪ್ರತಿಭಟನೆಯ ಹಾದಿ ಹಿಡಿಯಲಿದ್ದಾರೆ ಎನ್ನುವ ದೃಷ್ಟಿಯಿಂದ ಜನರನ್ನು ಸಮಾಧಾನ ಮಾಡುವ ಸಲು ವಾಗಿ ಹಾವೇರಿ-ಶಿರಸಿ ಹೊಸ ರೈಲು ಮಾರ್ಗದ ಸಮೀಕ್ಷೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ.

ಕಾರವಾರದ ಅಸ್ನೋಟಿಯಿಂದ ಮಂಗಳೂರಿನವರೆಗೆ ಅಂದಾಜು 300ಕಿಲೋ ಮೀಟರ್ ಕೊಂಕಣ ರೈಲು ಮಾರ್ಗ ಹಾದು ಹೋಗಿದೆ. ಆದರೆ, ಈ ಮಾರ್ಗವಾಗಿ ಯಾವುದೇ ಹೊಸ ರೈಲು ಓಡಿಸುವ ಬಗ್ಗೆ ಯಾವುದೇ ಪ್ರಸ್ತಾವ ಮಾಡಿಲ್ಲ. ದೇಶದ ವಾಣಿಜ್ಯ ನಗರಿ ಮುಂಬೈನಿಂದ ಕಾರವಾರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಮುಂಬೈ-ಕಾರವಾರ ರೈಲು ಕಳೆದ ಬಜೆಟ್‌ನಲ್ಲಿ ಮಂಗಳೂರಿಗೆ ವಿಸ್ತ ರಣೆಯಾಗಿತ್ತು. ಈ ಬಜೆಟ್‌ನಲ್ಲಿ ಅದು ಕೊಯಮತ್ತೂರಿಗೆ ವಿಸ್ತರಣೆ ಗೊಂಡಿದೆ.

ಯಶವಂತಪುರ-ಬೆಂಗಳೂರು ರಾತ್ರಿ ರೈಲು ಕಾರವಾರದ ವರೆಗೆ ವಿಸ್ತರಣೆಗೆ ಈ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಜಿಲ್ಲೆಯ ಜನ ನಿರೀಕ್ಷೆ ಇಟ್ಟು ಕೊಂಡಿದ್ದರು. ಆದರೆ, ಈ ನಿರೀಕ್ಷೆ ಹುಸಿ ಯಾಗಿದೆ. ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಬಗ್ಗೆ ಕಳೆದ ಬಜೆಟ್‌ನಲ್ಲಿ ಅಂದು ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಹೇಳಿದ ಮಾತನ್ನೇ ರೈಲ್ವೆ ಸಚಿವ ತ್ರಿವೇದಿ ಪುನರಾವರ್ತಿಸಿದ್ದಾರೆ. ಬ್ರಿಟಿಷರ ಕಾಲದಿಂದ ಚಾಲ್ತಿಯಲ್ಲಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಯೋಜ ನೆಯ ಜಾರಿಗೊಳಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಾಶಕ್ತಿ ಹೊಂದಿವೆ ಎಂದು ಜಿಲ್ಲೆಯ ಜನರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

`ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಸಂಬಂಧಿಸಿದಂತೆ ಪರಿಸರ ವರದಿಯನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಳಂಬ ಧೋರಣೆ ಅನುಸರಿಸುತ್ತಿವೆ. ಹಿಂದೊಮ್ಮೆ ನಾನು ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಸಚಿವ ಮುನಿಯಪ್ಪ ಅವರು ಆಕಸ್ಮಿಕವಾಗಿ ಭೇಟಿಯಾಗಿದ್ದರು.

ಪರಿಸರ  ವಿಷಯಕ್ಕೆ ಸಂಬಂಧಿಸಿದ ವರದಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕು ನಂತರ ಅದು ಪರಿಸರ ಇಲಾಖೆಗೆ ಬರಬೇಕು ಎಂದು ಆ ಸಂದರ್ಭದಲ್ಲಿ ತಿಳಿಸಿದ್ದರು. ಈ ಬಜೆಟ್‌ನಲ್ಲಿ ಯೋಜನೆಯ ಬಗ್ಗೆ ಪ್ರಸ್ತಾವ ಆಗದಿರುವುದು ನೋಡಿದರೆ ವರದಿ ಅಲ್ಲಿಗೆ ತಲುಪಿಲ್ಲ ಎಂದಾಯಿತು. ಯೋಜ ನೆಯ ಜಾರಿ ಮಾಡುವ ನಿಟ್ಟಿನಲ್ಲಿ ನಿರಂತರ ಹೋರಾಟಗಳು ನಡೆಯ ಬೇಕು~ ಎನ್ನುತ್ತಾರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಕವಿ ವಿಷ್ಣು ನಾಯ್ಕ.

`ಹಾವೇರಿ -ಶಿರಸಿ ಹೊಸ ರೈಲು ಮಾರ್ಗ ಸಮೀಕ್ಷೆ ಮಾಡುವ ಪ್ರಸ್ತಾವ ವನ್ನು ಮದ್ಯಪಾನ ಸಂಯಮ ಮಂಡಳಿತ ಅಧ್ಯಕ್ಷ ಸ್ವಾಗತಿಸಿದ್ದು ಈ ಮಾರ್ಗದ ಉಪಯುಕ್ತತೆಯ ಬಗ್ಗೆ ಪತ್ರಿಕೆಯಲ್ಲಿ ವರದಿ ಮಾಡಿದ್ದೇ. ಶಿವಮೊಗ್ಗ- ತಾಳ ಗುಪ್ಪ-ಸಿದ್ದಾಪುರ-ಶಿರಸಿ-ಹಾವೇರಿ ಈ ಮಾರ್ಗವು ಪ್ರಯಾಣಿಕರ ಮಾರ್ಗ ವಾಗಿದೆ. ಈ ಭಾಗದ ಅಡಿಕೆ ಬೆಳೆ ಹೆಚ್ಚಾಗಿ ಉತ್ತರ ಭಾರತಕ್ಕೆ ಹೋಗು ತ್ತದೆ. ಈ ರೈಲು ಮಾರ್ಗ ಆದರೆ ಅಡಿಕೆ ಬೆಳೆಯನ್ನು ಕಡಿಮೆ ದರದಲ್ಲಿ ಅಲ್ಲಿಗೆ ಕಳುಹಿಸಬಹುದಾಗಿದೆ. ಶಿರಸಿಯಿಂದ ಮುಂಬೈ, ಚೆನ್ನೈ, ದೆಹಲಿ, ಬೆಂಗಳೂರಿಗೆ ಹೋಗಲೂ ಈ ಮಾರ್ಗ ಅನುಕೂಲ ಕಲ್ಪಿಸಲಿದೆ~ ಎಂದರು.

`ಬಜೆಟ್ ಸಂಪೂರ್ಣ ನಿರಾಶದಾಯಕ ವಾಗಿದೆ. ಒಟ್ಟು 26 ರೈಲುಗಳನ್ನು ವಿಸ್ತ ರಣೆ ಮಾಡುವ ಬಗ್ಗೆ ಸಚಿವರು ಪ್ರಸ್ತಾವ ಮಾಡಿದ್ದು ಮುಂಬೈ ಮಂಗಳೂರು ರೈಲು ಕೇರಳಕ್ಕೆ ವಿಸ್ತರಣೆಗೊಂಡಿದೆ. ಪ್ರಯಾಣ ದರ ಹೆಚ್ಚಳ ಮಾಡಿರುವುದರಿಂದ ಮುಂಬೈಗೆ ಹೋಗಲು ಟಕೆಟ್‌ಗೆ ಕನಿಷ್ಟ 140 ರಿಂದ 150 ರೂಪಾಯಿ ಹೆಚ್ಚು ಖರ್ಚು ಬರಲಿದೆ. ವಿವೇಕಾನಂದ       ಜನ ಶತಾಬ್ದಿ ಅಂಗವಾಗಿ `ವಿವೇಕ ಎಕ್ಸ್‌ಪ್ರೆಸ್~ ರೈಲು ಪ್ರಾರಂಭಿಸುವುದಾಗಿ ಮಾಜಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಘೊಷಣೆ ಮಾಡಿದ್ದರು. ಅದು ಕೇವಲ ಘೋಷಣೆಯಾಗೇ ಉಳಿದಿದೆ~ ಎಂದು ತೆರಿಗೆ ಸಲಹೆಗಾರ ಜಗದೀಶ ಬಿರ್‌ಕೋಡಿಕರ್ `ಪ್ರಜಾವಾಣಿ~ಗೆ ತಿಳಿಸಿದರು.

`ಯಾರಿಗೂ ಪ್ರಯೋಜನಕ್ಕೆ ಬಾರದ ಬಜೆಟ್ ಇದಾಗಿದೆ. ಹುಬ್ಬಳ್ಳಿ- ಅಂಕೋಲಾ ಯೋಜನೆಯ ಬಗ್ಗೆ ಈ ಬಾರಿಯೂ ಪ್ರಸ್ತಾವ ಮಾಡದಿರುವುದು ವಿಷಾದನೀಯ.  ಹಾವೇರಿ-ಶಿರಸಿ ಹೊಸ ಮಾರ್ಗದ ಸರ್ವೆ ಮಾಡುವ ಪ್ರಸ್ತಾವ ಮಾಡಿರುವುದು ಜಿಲ್ಲೆಯ ಜನರ ದಿಕ್ಕುತಪ್ಪಿಸುವ ಕಾರ್ಯವಾಗಿದೆ~ ಎಂದು ಜಿಲ್ಲಾ ಜೆಡಿಎಸ್ ಘಟಕದ ಮಾಜಿ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.