ADVERTISEMENT

ಬಾಲ್ಯವಿವಾಹ ನಿಯಂತ್ರಿಸುವ ಕೆಲಸ ಆಗಲಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 5:25 IST
Last Updated 4 ಫೆಬ್ರುವರಿ 2012, 5:25 IST

ದಾಂಡೇಲಿ: ಬಾಲ್ಯವಿವಾಹ ಸಾಮಾ ಜಿಕ ಪಿಡುಗುಗಳಲ್ಲೊಂದಾಗಿದೆ ಎಂದು ಶಾಸಕ ಸುನೀಲ ಹೆಗಡೆ ಅಭಿಪ್ರಾಯ ಪಟ್ಟರು. ಅವರು ಬಾಲ್ಯ ವಿವಾಹ ನಿಷೇಧ ವರ್ಷಾಚರಣೆಯ ಭಾಗವಾಗಿ ಜಾಗೃತಿ ಮೂಡಿಸುವುದಕಕಗಿ ದಾಂಡೇಲಿಗೆ ಆಗಮಿಸಿದ ಕಲಾ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

 ಬಾಲ್ಯವಿವಾಹ ಮಕ್ಕಳ ಉಜ್ವಲ ಭವಿಷ್ಯವನ್ನು ಚಿವುಟಿ ಹಾಕುತ್ತದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿ ಸುವ ಕೆಲಸ ಆಗಬೇಕಿದೆ. ಇದು ಕೇವಲ ಕಾನೂನಿಂದ ಸಾಧ್ಯವಾಗದ ಕೆಲಸ. ಜನಜಾಗೃತಿ ಮೂಡಿಸುವ, ಪಾಲಕರಲ್ಲಿ ತಿಳುವಳಿಕೆ ಮೂಡಿಸುವ ಕೆಲಸಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷ ಗೋವಿಂದ ಮೇಲ ಗಿರಿ ವಹಿಸಿದ್ದರು. ಫೆವಾರ್ಡನ ಅಧ್ಯಕ್ಷರು ಬಾಲ ನ್ಯಾಯಮಂಡಳಿಯ ಸದಸ್ಯರೂ ಆದ ವೆಂಕಟೇಶ ನಾಯ್ಕ, ಕೆ.ಡಿ.ಡಿ.ಸಿ. ಸಮಾಜ ಸೇವಾ ಸಂಸ್ಥೆಯ ಸಂಯೋಜಕ ತಿಪ್ಪೇಸ್ವಾಮಿ, ನಗರಸಭಾ ಉಪಾಧ್ಯಕ್ಷ ಮಹೇಶ ಸಾವಂತ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಶಿಶು ಅಭಿವೃದ್ಧಿ ಪ್ರಭಾರಿ ಯೋಜನಾ ಅಧಿಕಾರಿ ಮೋಹಿನಿ ನಾಯಕ, ಗ್ರೀನಿಂಡಿಯಾ ಟ್ರಸ್ಟ್‌ನ ನಿರ್ದೇಶಕ ಬಿ.ಪಿ.ಮಹೇಂದ್ರಕುಮಾರ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕರಾದ ಬಿ.ಪಿ.ಮಹೇಂದ ಕುಮಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಾ ಸಿದ್ದಿ ವಂದಿಸಿದರು.

ನಂತರ ಬಾಲ್ಯವಿವಾಹ ನಿಷೇಧದ ಘೋಷಣೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಕಲಾ ಜಾಥಾದ ಮೆರವಣಿಗೆ ಹಾಗೂ ಬಸ್ ನಿಲ್ದಾಣದ ಬಳಿ ಬೀದಿ ನಾಟಕ ಪ್ರದರ್ಶನ  ನಡೆಯಿತು. ಬಂಗೂರು ನಗರ ಪದವಿ ಕಾಲೇಜಿನ ಎನ್.ಎಸ್.ಎಸ್.ವಿದ್ಯಾರ್ಥಿಗಳು, ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಿ.ಎ.ಸಿ.ಎಲ್.ಕರ್ನಾಟಕ, ಗ್ರೀನ್ ಇಂಡಿಯಾ ಟ್ರಸ್ಟ್ ದಾಂಡೇಲಿ ಇವುಗಳ ಸಂಯುಕ್ತಾಶ್ರಯದಲ್ಲಿ ಸಂಘ ಟಿಸಲ್ಪಟ್ಟತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.