ADVERTISEMENT

ಭಗವದ್ಗೀತಾ ಅಭಿಯಾನ: ಶ್ಲೋಕ ಪಠಣ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 7:19 IST
Last Updated 27 ಅಕ್ಟೋಬರ್ 2017, 7:19 IST

ಯಲ್ಲಾಪುರ: ಭಗವದ್ಗೀತಾ ಅಭಿಯಾನ ಸಪ್ತಾಹದ ಮೂಲಕ ನ.2 ರಿಂದ 30 ರವೆರೆಗೆ ನಡೆಯಲಿದ್ದು, ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸ್ವರ್ಣವಲ್ಲಿಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಅವರು ಪಟ್ಟಣದ ಶಕ್ತಿಗಣಪತಿ ದೇವಸ್ಥಾನದಲ್ಲಿ ತಾಲ್ಲೂಕು ಭಗವದ್ಗೀತಾ ಅಭಿಯಾನ ಸಮಿತಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನ.2 ರಿಂದ 8 ರವರೆಗೆ, 9-15 ರವರೆಗೆ, 16-22 ರವರೆಗೆ, 25-29 ರವರೆಗೆ ಸಪ್ತಾಹಗಳ ಮೂಲಕ ಅಭಿಯಾನ ನಡೆಯಲಿದ್ದು, ನ.30 ರಂದು ಗೀತಾ ಜಯಂತಿ ನಡೆಯಲಿದೆ ಎಂದರು. ನವೆಂಬರ್ ಮೂರನೇ ವಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಂಠಪಾಠ ಸ್ಫರ್ಧೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ 6ನೇ ಅಧ್ಯಾಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಬೇಕು. ನವೆಂಬರ್ ಕೊನೆಯ ವಾರ ಕುಮಟಾದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಲಿದೆ. ಈಗಾಗಲೆ ಕುಮಟಾ ಮತ್ತು ಜೊಯಿಡಾದಲ್ಲಿ ಪ್ರಶಿಕ್ಷಣ ತರಬೇತಿ ನೀಡಲಾಗಿದ್ದು, ಉಳಿದ ತಾಲೂಕುಗಳಲ್ಲಿ ಆರಂಭಗೊಳ್ಳಲಿದೆ. ಎಂದರು.

ಅಭಿಯಾನದಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ 6ನೇ ಅಧ್ಯಾಯವನ್ನು ಕಂಠಪಾಠಕ್ಕಾಗಿ ನಿಗದಿಗೊಳಿಸಲಾಗಿದೆ. ಸಾರ್ವಜನಿಕರಿಗೆ 700 ಶ್ಲೋಕಗಳನ್ನು ಪಠಿಸಲು ಸೂಚಿಸಲಾಗಿದೆ. ತಾಲ್ಲೂಕಿನ ಕೇಂದ್ರಗಳಲ್ಲಿ ಗೀತಾ ಪಠಣದ ಶಿಕ್ಷಣ ನೀಡುವ ಆಸಕ್ತರಿಗೆ ಅ.28 ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಶಾರದಾಂಬಾ ದೇವಸ್ಥಾನದಲ್ಲಿ ಗೀತಾ ಪಠಣದ ಪ್ರಶಿಕ್ಷಣ ನೀಡಲಾಗುವುದು. ಮಂಚೀಕೇರಿ, ಉಮ್ಮಚಗಿ, ಹಿತ್ಲಳ್ಳಿ, ಕುಂದರಗಿ ಭಾಗದವರಿಗೆ ಉಮ್ಮಚಗಿಯ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಶಿಕ್ಷಣ ನೀಡಲಾಗುವುದು ಎಂದರು.

ADVERTISEMENT

ಪ್ರಮುಖರಾದ ಎಸ್.ಎಸ್.ಭಟ್ಟ, ಡಿ.ಶಂಕರ ಭಟ್ಟ, ಬಿ.ಜಿ.ಹೆಗಡೆ ಗೇರಾಳ, ವೆಂಕಟ್ರಮಣ ಬೆಳ್ಳಿ, ಶಂಕರ ಭಟ್ಟ ತಾರೀಮಕ್ಕಿ, ಕೆ.ಜಿ.ಬೋಡೆ, ಡಾ.ರಾಜೇಶ ಶಾಸ್ತ್ರಿ, ಎಂ.ಎನ್.ಹೆಗಡೆ ಹಳವಳ್ಳಿ, ಎನ್.ಎಸ್,ಭಟ್ಟ, ಸುಬ್ರಹ್ಮಣ್ಯ ಹೆಗಡೆ, ನಾಗೇಶ ಮಳಲಗಾಂವ, ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ಕಾವೇರಿ ಮಳಲಗಾಂವ, ಸುಮಂಗಲಾ ಭಟ್ಟ ಗುಂಡ್ಕಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.