ADVERTISEMENT

ಮಾಟ, ಮಂತ್ರ ಕೇವಲ ಮೂಢನಂಬಿಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 8:50 IST
Last Updated 6 ಫೆಬ್ರುವರಿ 2012, 8:50 IST
ಮಾಟ, ಮಂತ್ರ ಕೇವಲ ಮೂಢನಂಬಿಕೆ
ಮಾಟ, ಮಂತ್ರ ಕೇವಲ ಮೂಢನಂಬಿಕೆ   

ಹೊನ್ನಾವರ: ಮಂತ್ರಿಸಿದ ಲಿಂಬು, ಕುಂಕುಮದಿಂದ ಏನನ್ನೋ ಸಾಧಿಸ ಬಹುದೆಂಬ ಭ್ರಮೆ ಹುಟ್ಟಿಸುವ ಮಾಟ-ಮಂತ್ರ ಕೇವಲ ಮೂಢನಂಬಿಕೆ ಯಾಗಿದ್ದು ಭೀತಿ ಹುಟ್ಟಿಸುವ ಇಂಥ ತಂತ್ರಗಾರಿಕೆಯಿಂದ ಸಮಾಜವನ್ನು ಮುಕ್ತಗೊಳಿಸಬೇಕಿದೆ ಎಂದು       ಎಸ್‌ಡಿಎಂಸಿ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕಿ ಕೆ.ಸುಧಾ ರಾವ್ ಹೇಳಿದರು.

ಕರ್ಕಿಯ ದೈವಜ್ಞ ಮಂಠದ ಜ್ಞಾನೇಶ್ವರಿ ಸಬಾಭವನದಲ್ಲಿ ಶನಿವಾರ ನಡೆದ ಹೊನ್ನಾವರ ತಾಲ್ಲೂಕು ದೈವಜ್ಞ ವಾಹಿನಿ ಮತ್ತು ಮಾತೃ ವಾಹಿನಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರಮದಿಂದ ನೆಮ್ಮದಿಯ ಬದುಕು ಸಾಧ್ಯವೆಂದು ಹೇಳಿದರು.

ಸಾಮಾಜಿಕವಾಗಿ ಹಾಗೂ ಆರ್ಥಿಕ ವಾಗಿ ಸಬಲರಾಗಿರುವ ಮಹಿಳೆಯರಿ ರುವ ಸಮಾಜದಲ್ಲಿ ಮಾತ್ರ ನಿಜವಾದ ಅಭಿವೃದ್ಧಿಯನ್ನು ಕಾಣಬಹುದೆಂದು ಅವರು ಅಭಿಪ್ರಾಯಪಟ್ಟರು.

ಹಣಕ್ಕಿಂತ ಆರೋಗ್ಯ ಮುಖ್ಯವೆಂದು ತಮ್ಮ ಆಶೀರ್ವಚನದಲ್ಲಿ ಅಭಿಪ್ರಾಯ ಪಟ್ಟ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ,  ಉತ್ತಮ ಸಂಸ್ಕಾರ ಗಳನ್ನು ರೂಢಿಸಿಕೊಳ್ಳು ವುದರಿಂದ ಬದುಕಿನಲ್ಲಿ ಸಂತೋಷ ಹೊಂದಬಹುದೆಂದು ಹೇಳಿದರು.

ಸದಾನಂದ ಶೇಟ್,              ದೈವಜ್ಞ ವಾಹಿನಿಯ ಅಧ್ಯಕ್ಷ           ಸತ್ಯನಾರಾಯಣ ಶೇಟ್,           ಮಾತೃ ವಾಹಿನಿಯ ಊರ್ಮಿಳಾ ಶೇಟ್, ನರಸಿಂಹ ಮೂರ್ತಿ ಮಾತನಾಡಿದರು.
ಮೋಹನ ರಾಯ್ಕರ್, ವಿಜಯ ಕುಮಾರ ಕಾನಳ್ಳಿ ನಿರೂಪಿಸಿದರು. ಕೃಷ್ಣಕುಮಾರ ಸ್ವಾಗತಿಸಿದರು.
ಆರ್.ಎಂ.ಶೇಟ್ ವಂದಿಸಿದರು.

ನೆಲ್ಲೂರು ಪಾಂಡುರಂಗ           ಶೇಟ್ ಅವರು ರಚಿಸಿದ ಕಲಾಕೃತಿಗಳ ಪ್ರದರ್ಶನ, ವಿವಿಧ ಸ್ಪರ್ಧಾ   ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.