ADVERTISEMENT

ಯುವ ಕಾಂಗ್ರೆಸ್ ಪದಾಧಿಕಾರಿ ಆಯ್ಕೆಗೆ ಮತದಾನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 7:05 IST
Last Updated 14 ಅಕ್ಟೋಬರ್ 2011, 7:05 IST

ಕುಮಟಾ: ರಾಜ್ಯ, ಲೋಕಸಭಾ ಹಾಗೂ ವಿಧಾನಸಭಾ ಮಟ್ಟದ ಯುವ ಕಾಂಗ್ರೆಸ್ ಘಟಕದ ಸಾಂಸ್ಥಿಕ ಚುನಾ ವಣೆ ಗುರುವಾರ ಇಲ್ಲಿಯ ಪಾಂಡು ರಂಗ ಹೊಟೇಲ್ ಸಭಾಭವನದಲ್ಲಿ ನಡೆಯಿತು.ಕುಮಟಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯುವ ಕಾಂಗ್ರೆಸ್ ಅಧ್ಯಕ್ಷ ಘಟದಿಂದ ಮಹಾಲಕ್ಷ್ಮೀ ಪಟಗಾರ, ಮಂಗಲಾ ಹಳ್ಳೇರ, ದಯಾನಂದ ವೆರ‌್ನೇಕರ್, ವಿಶಾಂತ ಆರ್. ಸ್ಥಲೇಕರ್ ಅನಂತ ಎಸ್. ನಾಯ್ಕ, ಶ್ರೀಧರ ಜಿ. ಹೆಗಡೆ, ಎಚಿನ ಎಂ. ನಾಯ್ಕ, ಮಹ ಮ್ಮದ್ ಎಂ. ಕೋಟೆಬಾಗಿಲ್, ಬಿಳಿಯಾ ಡಿ. ಮುಕ್ರಿ ಹಾಗೂ ರವಿ ಕೆ ಶೆಟ್ಟಿ ಸೇರಿ ಕುಮಟಾದಿಂದ 10 ಜನ ಆಕಾಂಕ್ಷಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಸ್ಪರ್ಧಿಗಳಲ್ಲಿ ಪ್ರತಿಯೊಬ್ಬರೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪದಾಧಿಕಾರಿಯಾಗಿ ಆಯ್ಕೆಗೊಳ್ಳಲು ಕನಿಷ್ಠ 10 ಮತಗಳನ್ನು ಪಡೆಯ ಬೇಕಾಗಿದೆ. 10ಕ್ಕಿಂತ ಕಡಿಮೆ ಮತ ಪಡೆದವರು ಸ್ಪರ್ಧೆಯಿಂದಲೇ ನಿರ್ಗ ಮಿಸುತ್ತಾರೆ. ಅತಿ ಹೆಚ್ಚು ಮತ ಪಡೆ ದವರು ಅಧ್ಯಕ್ಷರಾಗಿ, ಎರಡನೇ ಹೆಚ್ಚು ಮತ ಪಡೆದವರು ಉಪಾಧ್ಯಕ್ಷರಾಗಿ ಹಾಗೂ 10 ಹಾಗೂ 10ಕ್ಕಿಂತ ಹೆಚ್ಚು ಮತ ಪಡೆದವರು ಕಾರ್ಯದರ್ಶಿಗಳ ಹುದ್ದೆಗೆ ನೇರ ನೇಮಕ ಆಗುತ್ತಾರೆ.
 
ಅದೇ ರೀತಿ ಲೋಕಸಭಾ ವ್ಯಾಪ್ತಿಯ ಯುವ ಕಾಂಗ್ರೆಸ್ ಘಟಕಕ್ಕೆ ಒಟ್ಟೂ 12 ಜನರು ಸ್ಪರ್ಧಿಸಿದ್ದು ಅವರಲ್ಲಿ ಕನಿಷ್ಠ 20 ಮತ ಪಡೆದವರು ಮಾತ್ರ ಆಯ್ಕೆ ಗೊಳ್ಳುತ್ತಾರೆ. ಅತಿ ಹೆಚ್ಚು ಮತ ಪಡೆ ದವರು ಅಧ್ಯಕ್ಷರಾಗಿ ಎರಡನೇ ಹೆಚ್ಚು ಮತ ಪಡೆದವರು ಉಪಾಧ್ಯಕ್ಷರಾಗಿ ಹಾಗೂ ನಂತರ ಹೆಚ್ಚು ಮತ  ಅಂದರೆ 20ಕ್ಕಿಂತ ಹೆಚ್ಚು ಮತ ಪಡೆದವರು ಕಾರ್ಯದರ್ಶಿಗಳಾಗಿ ಆಯ್ಕೆಗೊಳ್ಳು ತ್ತಾರೆ.
 
ಮಹಾರಾಷ್ಟ್ರದ ಅಖಿಲ ಭಾರತ ಯುವ ಕಾಂಗ್ರೆಸ್  ಪದಾಧಿಕಾರಿಗಳು ಚುನಾವನೆ ನಡೆಸಿಕೊಟ್ಟಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಡಿ.ಸಿ.ಸಿ. ಉಪಾಧ್ಯಕ್ಷ ನಾಗೇಶ ನಾಯ್ಕ ಹಾಗೂ ಕಾಂಗ್ರೆಸ್ ಸೇವಾದಳ ರಾಜ್ಯ ಸಂಘಟನಾ ಕಾರ್ಯ ದರ್ಶಿ ಆರ್.ಎಚ್. ನಾಯ್ಕ ಮಾಹಿತಿ ನೀಡಿದರು.

ಶಿರಸಿಯಲ್ಲಿ
ಶಿರಸಿ: ಕಾಂಗ್ರೆಸ್ ಪಕ್ಷದ ಯುವ ಘಟ ಕದ ಚುನಾವಣೆ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರು ವಾರ ನಡೆಯಿತು. ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 318 ಮತದಾರರಲ್ಲಿ 292 ಸದಸ್ಯರು ಮತ ಚಲಾ ಯಿಸಿದರು.

ಮಹಾರಾಷ್ಟ್ರದಿಂದ ಬಂದ ಭಾರ ತೀಯ ಯುವ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಸುಧೀರ ಸಾರ್ವೆ ಮತ್ತು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಂಕರ ಕೊಠಾರಿ ನೇತೃತ್ವದ ನಾಲ್ಕು ಜನರ ತಂಡ ಚುನಾ ವಣೆ ಕಾರ್ಯ ನಡೆಸಿತು. ಕಾಂಗ್ರೆಸ್‌ನ ಸದಸ್ಯರು ಬೆಳಿಗ್ಗೆಯಿಂದಲೇ ಸರದಿ ಯಲ್ಲಿ ನಿಂತು ಮತ ಚಲಾಯಿಸಿದರು.
 
`ಕಿತ್ತೂರು, ಖಾನಾಪುರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ನಡೆದಿದ್ದು, ಒಟ್ಟೂ 2048 ಮತಗಳಿವೆ. ಕಿತ್ತೂರು, ಖಾನಾಪುರ ಮತ್ತು ಹಳಿಯಾಳದಲ್ಲಿ ಬುಧವಾರ ಚುನಾವಣೆ ಮುಗಿದಿದೆ. ಶಿರಸಿ, ಭಟ್ಕಳ, ಕುಮಟಾ ಮತ್ತು ಕಾರವಾರ ದಲ್ಲಿ ಗುರುವಾರ ಚುನಾವಣೆ ಶಾಂತಿ ಯುತವಾಗಿ ನಡೆಯಿತು~ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ತಿಳಿಸಿದರು. ಶಾಂತಿಯುತ ಚುನಾವಣೆಗೆ ಸಹಕರಿಸಿದ ಯುವ ಘಟಕದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

ಶಿರಸಿ-ಸಿದ್ದಾಪುರ ಕ್ಷೇತ್ರದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯ ದರ್ಶಿ ಸೇರಿದಂತೆ ಒಟ್ಟೂ 10 ಸ್ಥಾನ ಗಳಿಗೆ 11 ಅಭ್ಯರ್ಥಿಗಳು ಸ್ಪರ್ಧೆ ಯಲ್ಲಿದ್ದಾರೆ. ಗಳಿಸಿದ ಮತಗಳ ಸಂಖ್ಯೆ ಆಧಾರದಲ್ಲಿ ಹುದ್ದೆ ದೊರಕುತ್ತದೆ. ಐದು ಸಾಮಾನ್ಯ, ತಲಾ ಒಂದು ಪರಿ ಶಿಷ್ಠ ಜಾತಿ ಮಹಿಳೆ, ಅಲ್ಪಸಂಖ್ಯಾತ,  ಹಿಂದುಳಿದ ಸಾಮಾನ್ಯ ಮಹಿಳೆ ಸ್ಥಾನಕ್ಕೆ ನಿಗದಿಯಾಗಿದೆ.

ಕಣದಲ್ಲಿದ್ದವರು: ಕುಮಾರ ಜೋಶಿ ಸೋಂದಾ, ಗೀತಾ ಭೋವಿ, ಪ್ರದೀಪ ಶೆಟ್ಟಿ, ಅಬ್ದುಲ್ ರಶೀದ್ ಖಾನ್, ಗಣೇಶ ನಾಯ್ಕ, ಪ್ರವೀಣ ಪಾಟೀಲ (ಶಿರಸಿ), ಸುಮಾ ನಾಯ್ಕ, ಕೃಷ್ಣ ಮೂರ್ತಿ ನಾಯ್ಕ, ನವೀನ ಹೆಗಡೆ, ಅಣ್ಣಪ್ಪ ನಾಯ್ಕ (ಸಿದ್ದಾಪುರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.