ADVERTISEMENT

ಯೋಧರಿಗೆ ಸಾರ್ವಜನಿಕರ ಪ್ರೀತಿಯ ಗೌರವ

​ಪ್ರಜಾವಾಣಿ ವಾರ್ತೆ
Published 14 ಮೇ 2018, 10:53 IST
Last Updated 14 ಮೇ 2018, 10:53 IST
ಸಿದ್ದಾಪುರ ತಾಲ್ಲೂಕಿನ ಹಾರ್ಸಿಕಟ್ಟಾದಲ್ಲಿ ಶನಿವಾರ ಸೇನಾಪ‍ಡೆಯ ಯೋಧರಿಗೆ ಸ್ಥಳೀಯರು ಸನ್ಮಾನಿಸಿದರು
ಸಿದ್ದಾಪುರ ತಾಲ್ಲೂಕಿನ ಹಾರ್ಸಿಕಟ್ಟಾದಲ್ಲಿ ಶನಿವಾರ ಸೇನಾಪ‍ಡೆಯ ಯೋಧರಿಗೆ ಸ್ಥಳೀಯರು ಸನ್ಮಾನಿಸಿದರು   

ಸಿದ್ದಾಪುರ: ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಬಿಎಸ್ಎಫ್ ಯೋಧರಾದ ಕಮಾಂಡರ್ ಸಿ.ಕೆ.ಗಿರಿ, ರಾಕೇಶ, ವಿಕ್ರಮಾರ್ಜುನ ಅವರನ್ನು ಶನಿವಾರ ಮತದಾನದ ಅವಧಿ ಮಕ್ತಾಯದ ನಂತರ ತಾಲ್ಲೂಕಿನ ಹಾರ್ಸಿಕಟ್ಟಾದಲ್ಲಿ ಸಾರ್ವಜನಿಕರು ಗೌರವಿಸಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾರ್ಸಿಕಟ್ಟಾ ಸಮೀಪದ ವಿನಾಯಕ ನಾರಾಯಣ ನಾಯ್ಕ ದೇವಾಸ ಅವರನ್ನೂ ಗೌರವಿಸಲಾಯಿತು. ಕನ್ನಡ ಭಾಷೆ ಬಾರದಿದ್ದರೂ ಸ್ಥಳೀಯರೊಂದಿಗೆ ಪ್ರೀತಿಯಿಂದ ನಡೆದುಕೊಂಡ ಯೋಧರ ನಡತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಅನಂತ ಶಾನಭಾಗ, ಡಿ.ಕೆ.ನಾಯ್ಕ ತೆಂಗಿನಮನೆ, ಆರ್.ಕೆ.ನಾಯ್ಕ,ಜಯಂತ ನಾಯ್ಕ ತೆಂಗಿನಮನೆ, ರವಿ ಎಂ. ನಾಯ್ಕ, ಸಿ.ಎನ್.ಹೆಗಡೆ, ಜಯಂತ ಹೆಗಡೆ, ದಿನೇಶ ಹೆಗಡೆ ಚಳ್ಳೆಹದ್ದ, ಶಶಿಧರ ಗೌಡರ್,ಪಿ.ಡಿ.ನಾಯ್ಕ, ಮೈದಿನ್ ಸಾಬ್ ಸೇರಿದಂತೆ 100ಕ್ಕೂ ಹೆಚ್ಚು ಜನ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.