ADVERTISEMENT

ರಸ್ತೆ ಕಾಮಗಾರಿಗೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 6:05 IST
Last Updated 20 ಮಾರ್ಚ್ 2012, 6:05 IST

ಹೊನ್ನಾವರ: ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಭಾನುವಾರ ಹಳದೀಪುರ-ಸಾಂತಗಲ್ ರಸ್ತೆ ಡಾಂಬರೀಕರಣ ಹಾಗೂ ಸುಧಾ ರಣೆ ಕಾಮಗಾರಿಗೆ ಶಿಲಾನ್ಯಾಸಗೈದರು ಹಾಗೂ ತೊಳಾಕುಳಿ ಸೇತುವೆಯ ಉದ್ಘಾಟನೆ ನೆರವೇರಿಸಿದರು.

ಚಂದಾವರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ  ರಸ್ತೆ,ಸೇತುವೆ ಮೊದಲಾದ ಮೂಲಭೂತ ಸೌಕರ್ಯ ಗಳಿಗೆ ಆದ್ಯತೆ ನೀಡಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಸುವರ್ಣ ಗ್ರಾಮ ಯೋಜನೆ ಕುಂಠಿತ ವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿ ಸಿದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ವಿನೋದ ಪ್ರಭು, ಜಿಲ್ಲಾ ಪಂಚಾಯಿತಿಯ  ಸದಸ್ಯರಾದ ಸರೋಜಾ ಪೂಜಾರಿ, ಮಂಜುನಾಥ ಗೌಡ, ಗ್ರಾ.ಪಂ. ಅಧ್ಯಕ್ಷ ದಾಮೋದರ ನಾಯ್ಕ, ಲೋಕೋಪಯೋಗಿ      ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಜಿ.ಭಟ್ಟ, ತಹ ಶೀಲ್ದಾರ ಗಾಯತ್ರಿ ನಾಯಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.