ADVERTISEMENT

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಗುರಿಕಾರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:45 IST
Last Updated 11 ಫೆಬ್ರುವರಿ 2012, 5:45 IST

ಹಳಿಯಾಳ: ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಆರನೇ ವೇತನ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಸುವಾಗ ಪ್ರಾರ್ಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಬಾರದು.

ವರದಿಯಲ್ಲಿ ಶಿಕ್ಷಕರಿಗೆ ನ್ಯಾಯ ದೊರಕದಿದ್ದಲ್ಲಿ  ರಾಜ್ಯದಾದ್ಯಂತ ಶಿಕ್ಷಕರು ಹೋರಾಟ ಮಾಡಲಿದ್ದಾರೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಗುರಿಕಾರ ಹೇಳಿದರು.

ಸ್ಥಳಿಯ ಕಾರ್ಮೇಲ್ ಪ್ರಾಥಮಿಕ ಶಾಲೆಯಲ್ಲಿ ಜಿಪಂ ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾ ಲಯ ಹಳಿಯಾಳ, ಶೈಕ್ಷಣಿಕ ಜಿಲ್ಲೆ ಶಿರಸಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಮಾತನಾಡಿ ದರು.

ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಗುಣಾತ್ಮಕ ಶಿಕ್ಷಣ ನೀಡುವ ಸಲುವಾಗಿ ಶಿಕ್ಷಕರನ್ನು ಕ್ರಿಯಾಶೀಲರನ್ನಾಗಿ ಕಾರ್ಯ ಮಾಡಲು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ರಚನಾತ್ಮಕ ಕಾರ್ಯಕ್ರಮ ಮಾಡುತ್ತಾ ಇದೆ ಎಂದರು.

ವಿಶೇಷ ಉಪನ್ಯಾಸಕ ಕೆ.ಎಲ್.ಎಸ್ ಪಿಯು ಕಾಲೇಜಿನ ಉಪನ್ಯಾಸಕ ಮಂಜುನಾಥ ಭಟ್ಟ ಮಾತನಾಡಿದರು.
ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಾಯ್ಕ, ಸಮನ್ವಯಾಧಿಕಾರಿ ವೈ.ಜಿ.ಕುರಿ, ಎನ್.ಎಸ್.    ಉದ್ದಣ್ಣವರ, ಚೆನ್ನಂಪಲ್ಲಿ, ಸುರೇಂದ್ರ ಭೇಂಡೆ ಮತ್ತಿತರರು     ಉಪಸ್ಥಿತರಿದ್ದರು.

ಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ.ಡಿ.ಮಡಿವಾಳ ಸ್ವಾಗತಿಸಿದರು. ಹೇಮಾ ಕಾಮತ್ ಹಾಗೂ ಎಸ್.ಜಿ. ಲಕ್ಕಲಕಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.