ADVERTISEMENT

ಸಿಡಿಲು ಬಡಿದು ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 5:30 IST
Last Updated 20 ಜೂನ್ 2012, 5:30 IST

ಕಾರವಾರ: ಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಎರಡು ಮನೆ ಮತ್ತು ದೇವಸ್ಥಾನದ ಗೋಡೆಯೊಂದು ಕುಸಿದಿದೆ. ಮಂಗಳವಾರ ಬೆಳಿಗ್ಗೆ ಸಿಡಿಲು ಬಡಿದು ಮೂವರು ಗಾಯಗೊಂಡಿದ್ದಾರೆ.

ತಾಲ್ಲೂಕಿನ ಮಖೇರಿಯ ಬಾಗಿಲ ಪಾಯಕ (ದ್ವಾರಪಾಲಕ) ದೇವಸ್ಥಾನ ಪ್ರತಿಷ್ಟಾಪನಾ ಕಾರ್ಯ ಇತ್ತೀಚೆಗಷ್ಟೇ ಪೂರ್ಣಗೊಂಡಿತು. ಗೋಡೆಬಿದ್ದ ರಭಸಕ್ಕೆ ನೂರಾರು ದ್ವಾರಪಾಲಕ ಮೂರ್ತಿಗಳು ಭಗ್ನಗೊಂಡಿವೆ.

`ಬೆಳಿಗ್ಗೆ ಮನೆಯಿಂದ ಪಟ್ಟಣಕ್ಕೆ ಹೊರಟ್ಟಿದ್ದೆ. ರಸ್ತೆಯಿಂದ 200-300 ಮೀಟರ್ ದೂರವಿದ್ದ ದೇವಸ್ಥಾನದ ಸಮೀಪ ದೊಡ್ಡ ಶಬ್ದಕೇಳಿಸಿತು. ಹತ್ತಿರಹೋಗಿ ನೋಡಿದರೆ ದೇವಸ್ಥಾನ ಗೋಡೆ ಕುಸಿದಿತ್ತು. ಇದು ಪುರಾತನ ದೇವಸ್ಥಾನವಾಗಿದ್ದು ಭಕ್ತರು ಸಂಕಷ್ಟದಲ್ಲಿದ್ದಾಗ ದ್ವಾರಪಾಲಕ ನೆರವಿಗೆ ಬರುತ್ತಾನೆ ಎನ್ನುವ ನಂಬಿಕೆ ಇಲ್ಲಿಯ ಜನರಲ್ಲಿದೆ~ ಎಂದು ಸ್ಥಳೀಯ ನಿವಾಸಿ ಅಚ್ಚುತ ಕಾಣಕೋಣಕರ್ `ಪ್ರಜಾವಾಣಿ~ಗೆ ತಿಳಿಸಿದರು.

ಹೊನ್ನಾವರ ವರದಿ
ತಾಲ್ಲೂಕಿನ ಗುಣವಂತೆಯ ಸುಧಾ ಭಟ್ ಮತ್ತು ಮಾವಿನಕುರ್ವಾದ ಲುಡ್ಡಿನ್ ಡಯಾಸ್ ಎಂಬುವರಿಗೆ ಸೇರಿದ ಮನೆಗೆ ಭಾಗಶಃ ಕುಸಿದಿದೆ. ಸ್ಥಳಕ್ಕೆ ತಹಶಿಲ್ದಾರ ಗಾಯತ್ರಿ ನಾಯಕ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಸಿಡಿಲು ಬಡಿದ ಪರಿಣಾಮ ಹೊನ್ನಾವರ ಪಟ್ಟಣದ ಕಾಸರಕೋಡು ಟೊಂಕದ ಒಂದೇ ಕುಟುಂಬದ ದೀಪಾ ತಾಂಡೇಲ, ನೀಲಾ ತಾಂಡೇಲ ಮತ್ತು ಮಹೇಶ ತಾಂಡೇಲ ಗಾಯಗೊಂಡಿದ್ದಾರೆ. ಎಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾದಿಂದ ಪಾರಾಗಿದ್ದಾರೆ.  ಸಿಡಿಲಿನ ಹೊಡೆತಕ್ಕ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.