ADVERTISEMENT

ಹೊಸ ತಿರುವು ಪಡೆದ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 6:05 IST
Last Updated 18 ಡಿಸೆಂಬರ್ 2017, 6:05 IST
ಬಾಲಕಿ ಕೈಗೆ ಆಗಿರುವ ಗಾಯ
ಬಾಲಕಿ ಕೈಗೆ ಆಗಿರುವ ಗಾಯ   

ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ): ಪರೇಶ್‌ ಮೇಸ್ತ ಶಂಕಾಸ್ಪದ ಸಾವಿನಿಂದ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣವನ್ನು ಮತ್ತಷ್ಟು ಹದಗೆಡಿಸಿದ್ದ ಶಾಲಾ ಬಾಲಕಿ ಕಾವ್ಯಾ ನಾಯ್ಕಳ ಮೇಲಿನ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

‘ತಾಲ್ಲೂಕಿನ ಮಾಗೋಡು ಕೊಡ್ಲಗದ್ದೆ ಗ್ರಾಮದ ಕಾವ್ಯಾಳ ಮೇಲೆ ಯಾರೂ ಹಲ್ಲೆ ನಡೆಸಿಲ್ಲ. ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿ ಆಕೆಯೇ ಸ್ವತಃ ಕೈಗೆ ಗಾಯ ಮಾಡಿಕೊಂಡು ಹಲ್ಲೆ ಮಾಡಿದ ಬಗ್ಗೆ ಕಥೆ ಕಟ್ಟಿದ್ದಾಳೆ. ಇದು ವಿಚಾರಣೆ ವೇಳೆ ಬಹಿರಂಗಗೊಂಡಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯುವಕನಿಂದ ಕಿರುಕುಳ: ‘9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾವ್ಯಾ ನಿತ್ಯ 8 ಕಿ.ಮೀ. ದೂರದಲ್ಲಿರುವ ಶಾಲೆಗೆ ಕಾಲ್ನಡಿಗೆಯಲ್ಲಿ ಹೋಗಿ ಬರುತ್ತಿದ್ದಳು. ಮಾಗೋಡ ಗ್ರಾಮದ ಬಜ್ಜಿಕೇರಿಯ ಯುವಕ ಗಣೇಶ ಈಶ್ವರ ನಾಯ್ಕ ಐದಾರು ತಿಂಗಳಿಂದ ದಾರಿಯಲ್ಲಿ ಆಕೆಯನ್ನು ಅಡ್ಡಗಟ್ಟಿ ತನ್ನ ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಕೂರುವಂತೆ ಪೀಡಿಸುತ್ತಿದ್ದ’ ಎಂದು ಹೇಳಿದರು.

ADVERTISEMENT

* * 

ಆರೋಪಿ ಗಣೇಶ ತಲೆ ಮರೆಸಿಕೊಂಡಿದ್ದಾನೆ. ಸಂತೋಷ ಎಂಬುವನು ಕೂಡಾ ಪ್ರಕರಣದ ಆರೋಪಿಯಾಗಿದ್ದು, ಅಪ್ರಾಪ್ತರಾಗಿರುವ ಈ ಇಬ್ಬರ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ವಿನಾಯಕ ವಿ.ಪಾಟೀಲ, ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.