ADVERTISEMENT

‘ನಾಟಕ ಮೂಲಕ ನೀತಿ ಬೊೋಧಿಸಿದ ಏಣಗಿ ಬಾಳಪ್ಪ’c

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:38 IST
Last Updated 23 ಸೆಪ್ಟೆಂಬರ್ 2013, 9:38 IST

ಸಂಕೇಶ್ವರ: ನಾಟಕಗಳನ್ನು ಕೇವಲ ಮನರಂಜನೆಗಾಗಿ ಮಾಡದೆ ನಾಟಕ ಗಳ ಮೂಲಕ ನೀತಿಯನ್ನು ಭೋದಿಸಿದ ಕೀರ್ತಿ  ಏಣಗಿ ಬಾಳಪ್ಪನವರಿಗೆ ಸಲ್ಲುತ್ತದೆ ಎಂದು ಪ್ರೊ.ವಿ.ಬಿ.ಚೌಗಲಾ ಹೇಳಿದರು.

ಅವರು ಸಂಕೇಶ್ವರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ತಾಲ್ಲೂಕು ಘಟಕ, ಶರಣ ಸಂಸ್ಕ್ರತಿ ಅಧ್ಯಯನ ಕೇಂದ್ರ ನಿಡಸೋಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಮನೆ ಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಶತಾಯುಷಿ ಏಣಗಿ ಬಾಳಪ್ಪ ಕುರಿತು ಉಪನ್ಯಾಸ ಮಾಡಿದರು.

ಬಾಳಪ್ಪನವರು ತಮ್ಮ ಅಭಿನಯ ಕೌಶಲ್ಯ, ಮಧುರ ಕಂಠಸಿರಿಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾದರು. ಭೂಗತ ಸ್ವಾತಂತ್ರ್ಯ ಯೋಧರಿಗೆ ಆಶ್ರಯ ನೀಡಿದ್ದ ಬಾಳಪ್ಪನವರು ಕರ್ನಾಟಕ ಏಕೀಕರಣ ಕಹಳೆಯನ್ನು ಊದಿದರು. ನಿರ್ವ್ಯಸನಿಯಾದ ಬಾಳಪ್ಪನವರು ಇತರೆ ಕಲಾವಿದರು ಸಹಿತ ಹಾಗೇಯೆ ಇರಬೇಕು ಎಂದು ಬಯಸುತಿದ್ದರು.

ಕೋಡಿಹಳ್ಳಿಯ ಚ್ಯೆತನ್ಯ ದೇವರು, ಆಡಿ ಮಠದ ಶಿವಾನಂದ ಸ್ವಾಮೀಜಿ ಆಶೀವರ್ಚನ ನೀಡಿದರು. ಸಮಾ ರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ಎಲ್‌.ವಿ.ಪಾಟೀಲ ವಹಿ ಸಿದ್ದರು. ಸಮಾರಂಭದಲ್ಲಿ ಎ.ಬಿ. ಪರ್ವತರಾವ, ಶಿವಾನಂದ ಸಂಸುದ್ದಿ, ಡಾ.ಎಂ.ಸಿ.ಹೊಸುರ, ಚಂದ್ರಕಾಂತ ಕಿತ್ತೂರಕರ, ಬಾಳೇಶ ಲಕ್ಷೆಟ್ಟಿ,ಅಕಬರ ಸನದಿ, ಪ್ರೊ. ಶ್ರೀಶೆ್ಯಲ ಮಠಪತಿ,   ಶಂಕರಗೌಡ ದೇಸಾಯಿ, ವಿಶ್ವನಾಥ ಹಳಿಜೋಳಿ, ಹಮೀದಾಬೇಗಂ ದೇಸಾಯಿ, ಎಂ.ಎಸ್‌.ಕುರಬೇಟ, ಕಿರಣ ಇತರರು ಉಪಸ್ಥಿತರಿದ್ದರು.
ಸುನೀಲ ಪರ್ವತರಾವ ಸ್ವಾಗತಿಸಿ ದರು. ಪ್ರೊ.ಪ್ರಕಾಶ ಅವಲಕ್ಕಿ ವಂದಿಸಿ ದರು. ಎಸ್‌.ಡಿ.ಬಾಗೇವಾಡಿ ನಿರೂಪಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.