ADVERTISEMENT

ಉತ್ತರ ಕನ್ನಡ: ವಿಷಕಾರಿ ಹಣ್ಣಿನ ಬೀಜ ತಿಂದು 11 ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 13:48 IST
Last Updated 20 ಜೂನ್ 2023, 13:48 IST
ಹಳಿಯಾಳದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಬಗ್ಗೆ ಪೋಷಕರಿಂದ ಪೊಲೀಸರು ಮಾಹಿತಿ ಪಡೆದರು.
ಹಳಿಯಾಳದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಬಗ್ಗೆ ಪೋಷಕರಿಂದ ಪೊಲೀಸರು ಮಾಹಿತಿ ಪಡೆದರು.   

ಹಳಿಯಾಳ (ಉತ್ತರಕನ್ನಡ ಜಿಲ್ಲೆ): ತಾಲ್ಲೂಕಿನ ಗುಂಡೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 11 ವಿದ್ಯಾರ್ಥಿಗಳು ಸೋಮವಾರ ರಾತ್ರಿ ಶಾಲೆ ಆವರಣದ ಸಮೀಪದ ಗಿಡವೊಂದರ ಕಾಯಿ ತಿಂದು ಅಸ್ವಸ್ಥಗೊಂಡಿದ್ದಾರೆ.

‘ಹಣ್ಣುಗಳ ಬೀಜಗಳನ್ನು ತಿಂದಿದ್ದ ಮಕ್ಕಳು ಮನೆಗೆ ಬರುತ್ತಿದ್ದಂತೆ ಅಸ್ವಸ್ಥಗೊಂಡು, ವಾಂತಿ ಮಾಡಿಕೊಂಡರು. ಅವರಿಗೆ ಗ್ರಾಮದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ತಾಲ್ಲೂಕು ಆಸ್ಪತ್ರೆಗೆ ಸೇರಿಸಿದೆವು’ ಎಂದು ಮಕ್ಕಳ ಪೋಷಕರು ತಿಳಿಸಿದರು.

‘ವಿಷಕಾರಿ ಬೀಜ ತಿಂದ ಕಾರಣ ಮಕ್ಕಳಲ್ಲಿ ನಿರ್ಜಲೀಕರಣ ಆಗಿದೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಮನೆಗೆ ಕಳುಹಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.