ADVERTISEMENT

23 ಮಂದಿಗೆ ಕೋವಿಡ್ ದೃಢ

ಬಹುತೇಕರು ಈಗಾಗಲೇ ಸೋಂಕಿತರಾದವರ ಸಂಪರ್ಕಕ್ಕೆ ಬಂದವರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 15:43 IST
Last Updated 1 ಜುಲೈ 2020, 15:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಜಿಲ್ಲೆಯಲ್ಲಿ ಬುಧವಾರ ಒಟ್ಟು 23 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಈ ಪೈಕಿ ಭಟ್ಕಳ ಮತ್ತು ಅಂಕೋಲಾದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ಭಟ್ಕಳದ ಸೋಂಕಿತನ (ಪಿ 12047) ಪ್ರಾಥಮಿಕ ಸಂಪರ್ಕಕ್ಕೆ ಬಂದ 47 ವರ್ಷದ ಇಬ್ಬರು, 33, 42 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ. ಅಂತೆಯೇ, 47, 41 ವರ್ಷದ ಮಹಿಳೆಯರು, 20 ವರ್ಷದ ಯುವತಿ,11,12, 13 ವರ್ಷದಬಾಲಕಿಯರಿಗೆ ಕೋವಿಡ್ ಖಚಿತವಾಗಿದೆ. ಚೆನ್ನೈನಿಂದ ಬಂದಿರುವ 27 ವರ್ಷದ ಯುವಕ ಕೂಡ ಸೋಂಕಿತರಾಗಿದ್ದಾರೆ.

ಕುಮಟಾ ತಾಲ್ಲೂಕಿನಲ್ಲಿ ಆರು ಮಂದಿಗೆ ಸೋಂಕು ದೃಢಪಟ್ಟಿದ್ದು, ಎಲ್ಲರೂ ಮಹಾರಾಷ್ಟ್ರದಿಂದ ವಾಪಸಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದವರಾಗಿದ್ದಾರೆ. ಅವರಲ್ಲಿ 14 ವರ್ಷದ ಬಾಲಕಿ, 22 ವರ್ಷದ ಯುವಕ, 40, 51, 40 ವರ್ಷದ ಮಹಿಳೆಯರು ಹಾಗೂ 53 ವರ್ಷದ ಪುರುಷ ಒಳಗೊಂಡಿದ್ದಾರೆ.

ADVERTISEMENT

ಅಂಕೋಲಾ ತಾಲ್ಲೂಕಿನಲ್ಲಿ ಐವರಿಗೆ ಸೋಂಕು ಕಾಣಿಸಿಕೊಂಡಿದ್ದು, ಎಲ್ಲರೂ ಸೋಂಕಿತರೊಬ್ಬರ (ಪಿ 10648) ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಅವರಲ್ಲಿ 49, 37 ವರ್ಷದ ಪುರುಷರು, 80 ವರ್ಷದ ಮಹಿಳೆ, 21 ವರ್ಷದ ಯುವತಿ ಹಾಗೂ 4 ವರ್ಷದ ಬಾಲಕಿ ಒಳಗೊಂಡಿದ್ದಾರೆ.

ಕಾರವಾರತಾಲ್ಲೂಕಿನಲ್ಲಿ 27 ವರ್ಷದ ಯುವಕರೊಬ್ಬರಿಗೆಕೋವಿಡ್ ದೃಢಪಟ್ಟಿದ್ದು, ಅವರಿಗೆ ಸೋಂಕಿನ ಮೂಲವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚುವ ಕಾರ್ಯದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.