ADVERTISEMENT

ಬೆಳಗಾವಿ: 9733 ಮಕ್ಕಳು ಪರೀಕ್ಷೆಗೆ ಹಾಜರು

ಸುಮಗವಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 12:23 IST
Last Updated 29 ಜೂನ್ 2020, 12:23 IST
ಶಿರಸಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಯಿತು
ಶಿರಸಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಯಿತು   

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿಯ ಮೂರನೇ ಪರೀಕ್ಷೆಯಾಗಿದ್ದ ವಿಜ್ಞಾನ ವಿಷಯವನ್ನು ಒಟ್ಟು 9733 ವಿದ್ಯಾರ್ಥಿಗಳು ಬರೆದರು. ಆರು ತಾಲ್ಲೂಕುಗಳಿಂದ ಒಟ್ಟು 612 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಮೊದಲ ಬಾರಿಗೆ ಪರೀಕ್ಷೆ ಬರೆದವರಲ್ಲಿ 9099 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 11 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಹೆಸರು ನೋಂದಾಯಿಸಿಕೊಂಡಿದ್ದ 198 ಪುನರಾವರ್ತಿತರಲ್ಲಿ 176 ಜನರು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. 322 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಉಳಿದುಕೊಂಡು ಪರೀಕ್ಷೆಗೆ ಬಂದಿದ್ದರು. ಹೊರ ಜಿಲ್ಲೆಗಳಿಂದ ವಲಸೆ ಬಂದ 369 ಮಕ್ಕಳಲ್ಲಿ 367 ಮಕ್ಕಳು ಪರೀಕ್ಷೆ ಬರೆದರು.

ಹಿಂದಿನ ಎರಡು ಪರೀಕ್ಷೆಗಳಂತೆ, ಸೋಮವಾರ ಸಹ ಎಲ್ಲ ಕೇಂದ್ರಗಳಲ್ಲಿ ಮಕ್ಕಳ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಿ ಪರೀಕ್ಷಾ ಕೊಠಡಿಗೆ ಕಳುಹಿಸಲಾಯಿತು. ಕೊಠಡಿ ಮೇಲ್ವಿಚಾರಕರು, ಸಂಬಂಧಪಟ್ಟ ಶಾಲಾ ಶಿಕ್ಷಕರು ಬೆಳಿಗ್ಗೆ 8 ಗಂಟೆಯಿಂದಲೇ ಕೇಂದ್ರದಲ್ಲಿ ಹಾಜರಿದ್ದರು.

ADVERTISEMENT

‘ಪರೀಕ್ಷೆ ಮುಂದೂಡಿಕೆಯಾಗಿದ್ದರಿಂದ ನಡುವಿನ ಅವಧಿಯಲ್ಲಿ ವಿಷಯದ ಮೇಲಿನ ಹಿಡಿತ ತಪ್ಪಿತ್ತು. ಚಂದನವಾಹಿನಿಯಲ್ಲಿ ಪ್ರಕಟಗೊಂಡ ಪುನರ್‌ಮನನ ಕಾರ್ಯಕ್ರಮ ಸಹಕಾರಿಯಾಯಿತು. ವಿಜ್ಞಾನ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ಯಾವುದೇ ಅಳುಕಿಲ್ಲದೇ ಪರೀಕ್ಷೆ ಬರೆದೆ’ ಎಂದು ವಿದ್ಯಾರ್ಥಿನಿ ಶ್ರದ್ಧಾ ಪ್ರತಿಕ್ರಿಯಿಸಿದಳು.

ಕಂಟೈನ್ಮೆಟ್ ಪ್ರದೇಶದಿಂದ ಬಂದು ಪರೀಕ್ಷೆ ಬರೆದವರು 24
ಅನಾರೋಗ್ಯದ ಕಾರಣ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದವರು 16

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.