ADVERTISEMENT

ದಾಂಡೇಲಿ | ಪಾಳು ಬಿದ್ದ ಹಳೇ ಪೊಲೀಸ್‌ ಕ್ವಾಟ್ರಸ್

ಅನೈತಿಕ ಚಟುವಟಿಕೆ ನಿಯಂತ್ರಣಕ್ಕೆ ಸ್ಥಳೀಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 6:14 IST
Last Updated 11 ಆಗಸ್ಟ್ 2025, 6:14 IST
ದಾಂಡೇಲಿ ನಗರದ ಟೌನ್ ಶಿಪ್ ನಲ್ಲಿ ಇರುವ ಪೋಲಿಸ್ ಕ್ವಾಟ್ರಸ್ ಪಾಳು ಬಿದ್ದು ಗಿಡಗಂಟಿಗಳು ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ದಾಂಡೇಲಿ ನಗರದ ಟೌನ್ ಶಿಪ್ ನಲ್ಲಿ ಇರುವ ಪೋಲಿಸ್ ಕ್ವಾಟ್ರಸ್ ಪಾಳು ಬಿದ್ದು ಗಿಡಗಂಟಿಗಳು ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗಿದೆ.   

ದಾಂಡೇಲಿ: ನಗರದ ಟೌನ್‌ಶಿಫ್‌ನಲ್ಲಿರುವ ಪೊಲೀಸ್ ಕ್ವಾಟ್ರಸ್ ಈಗ ಪಾಳು ಬಿದ್ದು ಭೂತ ಬಂಗಲೆಯಂತಾಗಿ ಅನೈತಿಕ ಚಟುವಟಿಕೆಯ ತಾಣಗಳಾಗಿವೆ. ಹಲವು ವರ್ಷಗಳ ಹಿಂದೆ ಗೃಹ ಮಂಡಳಿಯಿಂದ ನಿರ್ಮಾಣಗೊಂಡಿದ್ದ ವಸತಿಗಳು ಜೀರ್ಣಾವಸ್ಥೆ ತಲುಪಿವೆ. ಈಗ ಇಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ಸುತ್ತಮುತ್ತಲಿನ ನಾಗರಿಕರು ಆಕ್ಷೇಪಿಸಿದ್ದಾರೆ.

ಪೊಲೀಸರ ವಸತಿಗಾಗಿಯೇ ಸುಮಾರು 30ಕ್ಕೂ ಹೆಚ್ಚು ಮನೆಗಳನ್ನು 1990ರ ದಶಕದಲ್ಲಿ ಗೃಹ ಮಂಡಳಿಯಿಂದ ನಿರ್ಮಿಸಲಾಗಿತ್ತು. ನಿರ್ಮಿಸಿದ ಆರಂಭದಲ್ಲಿ ನಗರದ ಪೊಲೀಸರು ವಾಸವಿದ್ದರು. ವರ್ಷ ಕಳೆದಂತೆ ಈ ವಸತಿ ಗೃಹಗಳು ನಿರ್ವಹಣೆ ಇಲ್ಲದೆ ಹಾಳಾಗ ತೊಡಗಿದವು.

ಕೆಲವೊಂದು ವಸತಿಗಳಲ್ಲಿ ವಾಸವಿದ್ದ ಪೊಲೀಸರೇ ಸಣ್ಣ ಪುಟ್ಟ ರಿಪೇರಿಗಳನ್ನು ಮಾಡಿಕೊಂಡು ಇರುತ್ತಿದ್ದರು. ಕಾಲ ಕಳೆದಂತೆ ಮಳೆಗೆ ಸೋರಲಾರಂಭಿಸಿದವು ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ಕಾಲ ದೂಡಿದರು. ಈಗ ಮನೆಯಲ್ಲಿ ಯಾರೂ ವಾಸವಿಲ್ಲದ ಕಾರಣ ಮನೆಗಳು ಜೀರ್ಣಾವಸ್ಥೆಗೆ ತಲುಪಿವೆ. ಈಗ ಠಾಣೆಯ ಅಕ್ಕ ಪಕ್ಕದಲ್ಲಿ ನೂತನ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ.

ADVERTISEMENT

ಈ ಹಳೆಯ ವಸತಿ ಗೃಹಗಳಲ್ಲಿ ಉಳಿಯಲು ಯಾರೋ ಮನಸ್ಸು ಮಾಡುತ್ತಿಲ್ಲ. ಗೋಡೆಗಳಿಗೆ ಗಿಡದ ಬಳ್ಳಿಗಳು ಅನೇಕ ಮನೆಗಳಿಗೆ ಗೋಡೆಗಳಿಗೆ ದೊಡ್ಡ ದೊಡ್ಡ ಮರಗಳು ಹುಟ್ಟಿಕೊಂಡಿವೆ. ಮನೆಗಳ ಕಿಟಕಿ ಬಾಗಿಲುಗಳನ್ನು ಯಾರೂ ಕಿತ್ತುಕೊಂಡು ಹೋಗಿದ್ದು, ಇಟ್ಟಂಗಿಗಳು ನಾಪತ್ತೆಯಾಗಿದೆ. ಮನೆಗಳು ಕುಸಿಯವ ಸ್ಥಿತಿಯಲ್ಲಿವೆ. ವಿದ್ಯುತ್, ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ದಾಂಡೇಲಿಯ ನಗರದ ಟೌನ್ ಶಿಪ್ ನಲ್ಲಿ ಇರುವ ಪೋಲಿಸ್ ಕ್ವಾಟ್ರಸ್ ಪಾಳು ಬಿದ್ದಿರುವುದು.
ಈ ಜಾಗದಲ್ಲಿ ನಿವೇಶನ ಮಾಡಿ ನೀಡಿದರೆ ಅಥವಾ ಜಿ ಪ್ಲಸ್ ಟು ಮಾದರಿಯ ಸಮುಚ್ಚಯ ನಿರ್ಮಿಸಿದರೆ ಬಹುತೇಕ ಜನರಿಗೆ ವಸತಿ ಪಡೆಯುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಸರ್ಕಾರ ನಗರಾಡಳಿತ ಅಥವಾ ಗೃಹ ಮಂಡಳಿ ಚಿಂತನೆ ಮಾಡಬೇಕು
ಶ್ಯಾಂ ಬೆಂಗಳೂರು ದಾಂಡೇಲಿ ನಿವಾಸಿ

ಅನೈತಿಕ ಚಟುವಟಿಕೆಗಳ ತಾಣ ಸಂಪೂರ್ಣವಾಗಿ ಪಾಳು ಬಿದ್ದು ಈ ಮನೆಗಳು ಭೂತ ಬಂಗಲೆಯಂತಾಗಿ ಅನೈತಿಕ ಚಟುವಟಿಕೆಯ ಕೇಂದ್ರವಾಗಿದೆ. ಪ್ರೇಮಿಗಳಿಗೆ ನೆಚ್ಚಿನ ತಾಣವಾದರೆ ದೈಹಿಕ ತೃಷೆಗಳನ್ನು ತೀರಿಸಿಕೊಳ್ಳಲು ಕಟ್ಟಡದೊಳಗೆ ಬಂದು ಸೇರುತ್ತಾರೆ. ಗಾಂಜಾ ಸೇವನೆಗೆ ಹಾಗೂ ಹೆಂಡದ ಅಮಲೇರಿಸಿಕೊಳ್ಳಲು ಈ ಜಾಗ ಬಳಸಿಕೊಳ್ಳುತ್ತಾರೆ ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಸ್ಥಳಿಯರ ಒತ್ತಾಯವಾಗಿದೆ. ಈ ಪ್ರದೇಶವನ್ನು ಸ್ವಚ್ಛಗೊಳಿಸಿ ಪೊಲೀಸ್‌ ಇಲಾಖೆ ಹಾಗೂ ಜನರ ಅನುಕೂಲಕ್ಕೆ ಯಾವುದಾದರೂ ಕಟ್ಟಡ ನಿರ್ಮಿಸಿದರೆ ಸ್ಥಳದ ಲಾಭವಾದರೂ ಸಿಗುತ್ತದೆ ಎಂದು ಸಮೀಪದ ನಿವಾಸಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.