ಶಿರಸಿ: ತಾಲ್ಲೂಕಿನ ರಾಗಿಹೊಸಳ್ಳಿ ಸಮೀಪ ಶಿವಗದ್ದೆಯಲ್ಲಿ ಗುರುವಾರ, ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಎದುರಿನಿಂದ ಬರುತ್ತಿದ್ದ ಲಾರಿಗೆ ಗುದ್ದಿದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.
ಸಿದ್ದಾಪುರ ರವೀಂದ್ರನಗರದ ಪುಂಡಲೀಕ ಶಾನಭಾಗ (72) ಮೃತವ್ಯಕ್ತಿ. ಕಾರಿನಲ್ಲಿದ್ದ ಮಂಜುನಾಥ ಭೀಮಪ್ಪ ನೀಲಿ (39), ಅಶ್ವಿನಿ ಶಾನಭಾಗ (27), ನಾರಾಯಣ ಶಾನಭಾಗ (82) ಗಾಯಗೊಂಡವರು. ಕಾರು ಶಿರಸಿಯಿಂದ ಕುಮಟಾ ಕಡೆ ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.