ಶಿರಸಿ: ನಗರದ ಬಂಗಾರದ ವರ್ತಕರೊಬ್ಬರಿಂದ 23 ವರ್ಷಗಳ ಹಿಂದೆ ₹ 6 ಸಾವಿರ ಪಡೆದು, ಮರಳಿಸದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಗರಠಾಣೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿಯ ದತ್ತಾತ್ರಯ ಹೆಗಡೆ ಬಂಧಿತ ಆರೋಪಿ. ಅವರು 1997ರ ಡಿ.19ರಂದು ಅಣ್ಣಪ್ಪ ರಾಯ್ಕರ್ ಎಂಬುವವರಿಂದ ಹಣ ಪಡೆದುಕೊಂಡಿದ್ದರು. ಆದರೆ, ಅದನ್ನು ಪುನಃ ಕೊಡದೇ ವಂಚಿಸಿದ್ದಾಗಿ ನಗರ ಠಾಣೆಯಲ್ಲಿ 1998ರಲ್ಲಿ ದೂರು ದಾಖಲಾಗಿತ್ತು. ರಾಜ್ಯದ ಹಲವು ಕಡೆ ಹುಡುಕಿದರೂ ಆರೋಪಿಯು ಸಿಕ್ಕಿರಲಿಲ್ಲ. ದಸ್ತಗಿರಿ ವಾರಂಟ್ ಜಾರಿ ಮಾಡಿದಾಗ ನ್ಯಾಯಾಲಯಕ್ಕೂ ಹಾಜರಾಗಿರಲಿಲ್ಲ.
ಆರೋಪಿಗೆ ಹುಡುಕಾಟ ಮುಂದುವರಿಸಿದ ಪೊಲೀಸರು ದತ್ತಾತ್ರಯ ಅವರನ್ನು ಬೆಂಗಳೂರಿನಲ್ಲಿ ಗುರುವಾರ ಬಂಧಿಸುವಲ್ಲಿ ಯಶಸ್ವಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.