ADVERTISEMENT

BSNL: ಪ್ರಧಾನಿ ಕಚೇರಿಗೆ ದೂರು ನೀಡಿದ 33 ಗಂಟೆಯಲ್ಲಿ ದೂರವಾಣಿ ದುರಸ್ತಿ

ದೂರವಾಣಿ ದುರಸ್ತಿಗೆ ನಿರಾಕರಿಸಿದ್ದ ಬಿಎಸ್‌ಎನ್‌ಎಲ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 22:54 IST
Last Updated 8 ಫೆಬ್ರುವರಿ 2025, 22:54 IST
<div class="paragraphs"><p>ರವಿಕಿರಣ ಪಟವರ್ಧನ</p></div>

ರವಿಕಿರಣ ಪಟವರ್ಧನ

   

ಶಿರಸಿ: ಸ್ಥಿರ ದೂರವಾಣಿ ದುರಸ್ತಿಗೆ ಸಂಬಂಧಿಸಿದಂತೆ ಆಯುರ್ವೇದ ವೈದ್ಯ ಡಾ.ರವಿಕಿರಣ ಪಟವರ್ಧನ ಅವರು ಪ್ರಧಾನಿ ಕಚೇರಿಗೆ ದೂರು ನೀಡಿದ 33 ಗಂಟೆಯೊಳಗೆ ದುರಸ್ತಿ ಕಾರ್ಯ ನೆರವೇರಿದೆ. ಈ ಮೊದಲು, ದುರಸ್ತಿಗೆ ಬಿಎಸ್‌ಎನ್‌ಎಲ್‌ ನಿರಾಕರಿಸಿತ್ತು.

‘ನನ್ನ ಆಸ್ಪತ್ರೆಯ ಸ್ಥಿರ ದೂರವಾಣಿ ದುರಸ್ತಿಗೆ ಕೋರಿ ಬಿಎಸ್‌ಎನ್‌ಎಲ್ ಕಚೇರಿಗೆ ದೂರು ಸಲ್ಲಿಸಿದ್ದೆ. ಆದರೆ, ಅಲ್ಲಿನ ಸಿಬ್ಬಂದಿ ಬೇರೆ ಬೇರೆ ಕಾರಣಗಳನ್ನು ಹೇಳಿ, ದುರಸ್ತಿಗೆ ನಿರಾಕರಿಸಿದ್ದರು. ಈ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ಪ್ರಧಾನಿ ಕಚೇರಿಗೆ ಇ–ಮೇಲ್ ಮಾಡಿದ್ದೆ. ದುರಸ್ತಿಗೆ ಕೋರಿದ್ದೆ. 33 ಗಂಟೆಯೊಳಗೆ ಸ್ಥಿರ ದೂರವಾಣಿ ದುರಸ್ತಿಗೊಂಡು, ಕಾರ್ಯಾರಂಭ ಮಾಡಿದೆ’ ಎಂದು ಡಾ. ರವಿಕಿರಣ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.