ADVERTISEMENT

‘ಜಾತಿ, ಧರ್ಮ ಆಧಾರದಲ್ಲೇ ಸಂಸದರಾದ ಹೆಗಡೆ’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:01 IST
Last Updated 11 ಏಪ್ರಿಲ್ 2019, 17:01 IST
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ ಹಳಿಯಾಳದಲ್ಲಿ ಗುರುವಾರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ ಹಳಿಯಾಳದಲ್ಲಿ ಗುರುವಾರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.   

ಹಳಿಯಾಳ:‘ಜಾತಿ, ಧರ್ಮ ಆಧಾರ ಮೇಲೆ 25 ವರ್ಷಗಳಿಂದ ಅನಂತಕುಮಾರ ಹೆಗಡೆ ಚುನಾಯಿತರಾಗಿ ಬಂದಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆಅವರಕೊಡುಗೆ ಶೂನ್ಯ’ ಎಂದು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಜೆಡಿಎಸ್‌ನ ಆನಂದ ಅಸ್ನೋಟಿಕರ್ ದೂರಿದರು.

ಪಟ್ಟಣದಲ್ಲಿ ಗುರುವಾರಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು,‘ಜನರು ವಿಚಿತ್ರವಾದ ಸಂಸದರನ್ನು ಕಂಡಿದ್ದಾರೆ. ಮಾತೆತ್ತಿದರೆ ಕೇವಲ ಧರ್ಮದ ಬಗ್ಗೆ ಮಾತನಾಡುತ್ತಾರೆ. ನಾವೆಲ್ಲರೂ ಹಿಂದೂಗಳಲ್ಲವೇನು?ಅವರು ಎಂದಾದರೂ ಜಿಲ್ಲೆಯ ಸಮಸ್ಯೆ ಬಗ್ಗೆ ಎಲ್ಲಿಯಾದರೂ ಮಾತನಾಡಿದ್ದಾರೆಯೇ? ಕೌಶಲಾಭಿವೃದ್ಧಿ ಇಲಾಖೆಯ ಸಚಿವರಾಗಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ?’ ಎಂದು ಪ್ರಶ್ನಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಮಾತನಾಡಿ, ‘ಬಿಜೆಪಿ ಮುಖಂಡರು ಕೇವಲ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅನಂತಕುಮಾರ ಹೆಗಡೆ ಕೇವಲ ತಾವೇ ಹಿಂದೂಎಂದು ಹೇಳುತ್ತಾರೆ.ನಾವುಮರಾಠರು ಹಿಂದೂಗಳಲ್ಲವೇ?ಪ್ರಧಾನಿ ಮೋದಿ ಅನಂತಕುಮಾರ ಹೆಗಡೆಗೆ ಕೌಶಲಾಭಿವೃದ್ಧಿ ಖಾತೆಯ ಬದಲು ‘ಹೊಡಿ, ಬಡಿ, ಕಡಿ ಖಾತೆ’ಯನ್ನು ಹೊಸದಾಗಿ ಸೃಷ್ಟಿಸಿ ಕೊಡಬಹುದಿತ್ತು. ಅವರುಪ್ರತಿಯೊಂದು ಕಡೆ ಬೆಂಕಿ ಹಚ್ಚುವ ಕಾರ್ಯ ಮಾಡಿದ್ದಾರೆಯೇ ವಿನಾ ನಂದಿಸುವ ಕಾರ್ಯ ಮಾಡಿಲ್ಲ’ ಎಂದು ವಾಗ್ದಾಳಿ ಮಾಡಿದರು.

ADVERTISEMENT

ಮುಖಂಡರಾದ ಸಂತೋಷ ರೇಣಕೆ, ಎಲ್.ಎಸ್ ಅರಿಶಿಣಗೇರಿ, ರೀಟಾ ಸಿದ್ದಿ, ಮಹೇಶ್ರೀ ಮಿಸಾಳಿ, ಶ್ರೀನಿವಾಸ ಘೋಟ್ನೆಕರ, ಮಾಲಾ ಬ್ರಾಗಾಂಜಾ, ಉಮೇಶ ಬೋಳಶೆಟ್ಟಿ, ಮುಗದ ಖಯಾಮ್, ಎಸ್.ಎ.ಶೆಟವಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.