ADVERTISEMENT

ಡಾಲ್ಫಿನ್ ಸಾವು: ಹೊಟ್ಟೆಯಲ್ಲಿತ್ತು ನೈಲಾನ್ ಬಲೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 15:45 IST
Last Updated 27 ಜೂನ್ 2022, 15:45 IST
ಕಾರವಾರ ತಾಲ್ಲೂಕಿನ ದೇವಬಾಗದ ಕಡಲತೀರದಲ್ಲಿ ಸೋಮವಾರ ಕಂಡುಬಂದ ಡಾಲ್ಫಿನ್ ಕಳೇಬರವನ್ನು ವಲಯ ಅರಣ್ಯ ಸಂರಕ್ಷಣಾಧಿಕಾರಿ (ಕರಾವಳಿ ಮತ್ತು ಸಮುದ್ರ) ಬಿ.ಪ್ರಮೋದ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ ಯರಗಟ್ಟಿ, ಚಂದ್ರಶೇಖರ ಪರಿಶೀಲಿಸಿದರು

ಕಾರವಾರ: ತಾಲ್ಲೂಕಿನ ದೇವಬಾಗ ಕಡಲ ತೀರದಲ್ಲಿ ಸೋಮವಾರ ಇಂಡೊ ಪೆಸಿಫಿಕ್ ಹಂಪ್‌ಬ್ಯಾಕ್ ಡಾಲ್ಫಿನ್‌ನ ಕಳೇಬರ ‍ಪತ್ತೆಯಾಗಿದೆ. ಅದರ ಹೊಟ್ಟೆಯಲ್ಲಿ ನೈಲಾನ್ ಬಲೆ ಸಂಪೂರ್ಣವಾಗಿ ತುಂಬಿಕೊಂಡಿದ್ದು ಕಂಡುಬಂದಿದೆ.

ಸುಮಾರು 7.5 ಅಡಿಗಳಷ್ಟು ಉದ್ದದ ಗಂಡು ಡಾಲ್ಫಿನ್ ಇದಾಗಿದೆ. ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ.ಸಿ ಅವರ ಮಾರ್ಗದರ್ಶನದಲ್ಲಿ ಅದರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸ್ಥಳಕ್ಕೆ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಕರಾವಳಿ ಮತ್ತು ಸಮುದ್ರ) ಬಿ.ಪ್ರಮೋದ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ ಯರಗಟ್ಟಿ, ಚಂದ್ರಶೇಖರ,ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿಗಳಾದ ಶಾನ್ ನವಾಜ್, ಅಕ್ಷಯ್, ‘ರೀಫ್ ವಾಚ್’ ಸಂಸ್ಥೆಯ ತೇಜಸ್ವಿನಿ, ಡಾ.ಮೇಘನಾ ಮತ್ತು ವಿಧಾನ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.