ADVERTISEMENT

ಆರೋಗ್ಯ ಬಂಧು ಯೋಜನೆ 1 ತಿಂಗಳು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 30 ಮೇ 2023, 14:05 IST
Last Updated 30 ಮೇ 2023, 14:05 IST

ಜೊಯಿಡಾ: ಖಾಸಗಿ ಸಂಸ್ಥೆ ಆರೋಗ್ಯ ಬಂಧು ಯೋಜನೆಯಡಿ ತಾಲ್ಲೂಕಿನ ಡಿಗ್ಗಿ ಹಾಗೂ ಕ್ಯಾಸಲ್ ರಾಕ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡುತ್ತಿರುವ ಆರೋಗ್ಯ ಸೇವೆಗಳ ಅವಧಿ ಮೇ31ರಂದು (ನಾಳೆ) ಮುಗಿಯಲಿದ್ದು, ಈ ಭಾಗದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಯೋಜನೆಯನ್ನು ಒಂದು ತಿಂಗಳವರೆಗೆ ( ಜೂನ್ 30 ರವರೆಗೆ) ತಾತ್ಕಾಲಿಕವಾಗಿ ಮುಂದುವರೆಸಲು ಅನುಮೋದನೆ ದೊರೆತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ತಾಲ್ಲೂಕಿನ ಗಡಿಭಾಗವಾದ ಡಿಗ್ಗಿ ಹಾಗೂ ಕ್ಯಾಸಲ್ ರಾಕ್ ಭಾಗದಲ್ಲಿ ವನ್ಯ ಜೀವಿಗಳ ಹಾವಳಿ ಜೊತೆಗೆ ಸಾರಿಗೆ ಸಂಪರ್ಕದ ಕೊರತೆ ಇರುವುದರಿಂದ ಆರೋಗ್ಯ ಬಂಧು ಸೇವೆಯನ್ನು ಮುಂದುವರೆಸುವಂತೆ ಇಲ್ಲಿನ ಸ್ಥಳೀಯರು ಶಾಸಕರಿಗೆ ಮನವಿ ಸಲ್ಲಿಸಿದ್ದರು.

ಜನರು ಆರೋಗ್ಯ ಸೇವೆಗಳ ಪ್ರಯೋಜನ ಪಡೆಯಬೇಕು, ಮುಂದಿನ ದಿನಗಳಲ್ಲಿ ಆರೋಗ್ಯ ಬಂಧು ಯೋಜನೆಯನ್ನು ಕಾಯಂ ಆಗಿ ಸೇವೆ ಸಲ್ಲಿಸುವಂತೆ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.