ADVERTISEMENT

ಸ್ನೇಹಕುಂಜ ಸಂಸ್ಥೆಗೆ ‘ಈಕ್ವೆಟರ್–2021 ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:53 IST
Last Updated 16 ಜುಲೈ 2021, 19:53 IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಂಪತ್ರೆ ಜಡ್ಡಿ ಸಂರಕ್ಷಣಾ ಕಾರ್ಯ ಕೈಗೊಂಡ ಹೊನ್ನಾವರದ ಸ್ನೇಹಕುಂಜ ಸಂಸ್ಥೆಗೆ ವಿಶ್ವಸಂಸ್ಥೆ ‘ಈಕ್ವೆಟರ್ 2021’ ಪ್ರಶಸ್ತಿ ಘೋಷಿಸಿದೆ. ಪ್ರಶಸ್ತಿ ಮೊತ್ತ 10 ಸಾವಿರ ಯುಎಸ್ ಡಾಲರ್ ಮೊತ್ತ (ಸುಮಾರು ಏಳೂವರೆ ಲಕ್ಷ ರೂಪಾಯಿ) ಆಗಿದೆ.

ಈ ಕುರಿತು ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಹೆಗಡೆ ವಾನಳ್ಳಿ ಮಾಹಿತಿ ನೀಡಿದ್ದು, ‘130 ದೇಶಗಳ 600ಕ್ಕೂ ಹೆಚ್ಚು ಸಂಸ್ಥೆಗಳು ನಾಮನಿರ್ದೇಶನಗೊಂಡಿದ್ದವು. ಪ್ರಶಸ್ತಿ ಪಡೆದ ರಾಜ್ಯದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಸಂಸ್ಥೆಯದು’ ಎಂದರು.

‘ಅಪರೂಪದ ಜೌಗು ಪ್ರದೇಶದ ಕಾಡಿನ ಸಂರಕ್ಷಣೆ ಕೆಲಸಕ್ಕೆ ಮನ್ನಣೆ ಸಿಕ್ಕಿದೆ. ರಾಂಪತ್ರೆ ಜಡ್ಡಿ ಪುನಶ್ಚೇತನಗೊಳಿಸುವ ಜತೆಗೆ ಸಾಂಘಿಕ ಜೇನು ಕೃಷಿ, ಉಪವನ ಉತ್ಪನ್ನಗಳ ಮೌಲ್ಯವರ್ಧನೆ, ಶುದ್ಧ ಇಂಧನ ಬಳಸಿ ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸಿರುವ ಕೆಲಸಗಳನ್ನು ಪರಿಗಣಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿತ್ತು. ಕೋವಿಡ್‌ ಕಾರಣದಿಂದಾಗಿ ಪ್ರಶಸ್ತಿ ಸಮಾರಂಭ ಈ ಬಾರಿ ಆನ್‌ಲೈನ್ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.