ADVERTISEMENT

ಭಟ್ಕಳ | ಭಕ್ತಿಯಿಂದಷ್ಟೇ ದೇವರು ಸಂತೃಪ್ತಿ: ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಮೇ 2025, 11:33 IST
Last Updated 10 ಮೇ 2025, 11:33 IST
ಭಟ್ಕಳದ ಮಣ್ಕುಳಿಯ ಹನುಮಂತ ಹಾಗೂಲಕ್ಷ್ಮೀನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದಲ್ಲಿ ಚಿತ್ರಾಪುರ ಸಂಸ್ಥಾನದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿದರು
ಭಟ್ಕಳದ ಮಣ್ಕುಳಿಯ ಹನುಮಂತ ಹಾಗೂಲಕ್ಷ್ಮೀನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದಲ್ಲಿ ಚಿತ್ರಾಪುರ ಸಂಸ್ಥಾನದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿದರು   

ಭಟ್ಕಳ: ‘ಭಕ್ತಿಯಿಂದಷ್ಟೇ ಸಂತುಷ್ಟನಾಗುವ ಹನುಮಂತ ದೇವರು ಬೇಡಿದ್ದನ್ನು ನೀಡುತ್ತಾನೆ’ ಎಂದು ಚಿತ್ರಾಪುರ ಸಂಸ್ಥಾನದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹೇಳಿದರು.

ಮಣ್ಕುಳಿಯ ಹನುಮಂತ ಹಾಗೂ ಲಕ್ಷ್ಮೀನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದಲ್ಲಿ ಶುಕ್ರವಾರ ಆಶೀರ್ವಚನ ನೀಡಿದರು.

‘ಭಗವಂತನ ಧ್ಯಾನವನ್ನು ಪ್ರತಿ ದಿನ ಮಾಡುವುದರಿಂದ, ಭಗವಂತನಲ್ಲಿ ಲೀನವಾಗಿ ಬೇಡಿಕೊಳ್ಳುವುದರ ಮೂಲಕ ಅಂತಃಕರಣದಲ್ಲಿ ಪರಿವರ್ತನೆಯಾದಾಗ ಮಾತ್ರ ದೇವರ ಆಶೀರ್ವಾದ ದೊರೆಯುತ್ತದೆ’ ಎಂದರು.

ADVERTISEMENT

ಕುಮಟಾ ಶಾಸಕ ದಿನಕರ ಶೆಟ್ಟಿ, ‘ದೇವಸ್ಥಾನದ ನಿರ್ಮಾಣದಲ್ಲಿ ಸ್ಥಳೀಯರ ಹಾಗೂ ಇತರೇ ಸಮಾಜದವರ ಸಹಕಾರ ಸ್ಮರಣೀಯವಾಗಿದೆ. ಸಮಾಜದವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ’ ಎಂದು ತಿಳಿಸಿದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಷ ಎಂ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ದಿಲೀಪ ಶೆಟ್ಟಿ, ಸುರೇಶ ಶೆಟ್ಟಿ ಮಾತನಾಡಿದರು. ಆರತಿ ಸದಾನಂದ ಶೆಟ್ಟಿ, ತಾರಾ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.