ಶಿವರಾಜ ತಂಗಡಗಿ
ಶಿರಸಿ: ‘ರಾಜ್ಯದ ಎಲ್ಲ ಸಮುದಾಯದಲ್ಲೂ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಡವರಿದ್ದು, ಎಲ್ಲರಿಗೂ ಸರ್ಕಾರದ ಯೋಜನೆಗಳು ಸಿಗಬೇಕೆಂದು ಜಾತಿ ಗಣತಿ ವರದಿ ಜಾರಿ ಮಾಡಲಾಗುತ್ತಿದೆ. ಆದರೆ, ಬಿಜೆಪಿಯವರಿಗೆ ಬಡವರ ಬಗ್ಗೆ ಚಿಂತೆ ಇಲ್ಲ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಬನವಾಸಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಧಿಕಾರಿಗಳು ಮತ್ತು ಶಿಕ್ಷಕರು ಮನೆಮನೆಗೂ ಭೇಟಿ ನೀಡಿ, ಜಾತಿ ಗಣತಿ ವರದಿ ಸಿದ್ದಪಡಿಸಿದ್ದಾರೆ. ಪ್ರಮುಖ 54 ಮಾನದಂಡಗಳನ್ನು ಇಟ್ಟುಕೊಂಡು ಜಾತಿ ಗಣತಿ ಮಾಡಿದ್ದೇವೆ. ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದು, ಚರ್ಚಿಸಲಾಗುವುದು’ ಎಂದರು.
‘ರಾಜ್ಯದ ಎಲ್ಲಾ ಪ್ರಾಧಿಕಾರಿಗಳಿಗೂ ಅನುದಾನ ನೀಡಲಾಗಿದೆ. ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು’ ಎಂದರು. ಶಾಸಕ ಶಿವರಾಮ ಹೆಬ್ಬಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.