ಮುದ್ದಣ್ಣ ಹನಮಪ್ಪ ಹಾಲುಂಡಿ
ಕಾರವಾರ: ತಾಲ್ಲೂಕಿನ ಹೊಸಾಳಿ ಕ್ರಾಸ್ ಸಮೀಪದ ಬಿಡ್ತುಲಬಾಗದಲ್ಲಿ ಗುರುವಾರ ಗ್ರಾನೈಟ್ ದಾಸ್ತಾನನ್ನು ಲಾರಿಯಿಂದ ಇಳಿಸುವ ವೇಳೆ ಗ್ರಾನೈಟ್ ತಲೆ ಮೇಲೆ ಬಿದ್ದು ಉದ್ಯಮಿ ಮುದ್ದಣ್ಣ ಹನಮಪ್ಪ ಹಾಲುಂಡಿ (53) ಮೃತಪಟ್ಟಿದ್ದಾರೆ.
ನಗರದ ಬಾಂಡಿಶಿಟ್ಟಾದ ಮುದ್ದಣ್ಣ ಅವರು ಮೂರು ತಾಲ್ಲೂಕಿನ ಮೂರು ಕಡೆ ಟೈಲ್ಸ್ ಮತ್ತು ಸಿರಾಮಿಕ್ಸ್ ಮಳಿಗೆ ನಡೆಸುತ್ತಿದ್ದರು. ದುರ್ಘಟನೆ ನಡೆದ ಬಿಡ್ತುಲಭಾಗದಲ್ಲಿ ಈಚೆಗಷ್ಟೆ ಹೊಸ ಮಳಿಗೆ ತೆರೆದಿದ್ದರು.
‘ಹೊಸ ಮಳಿಗೆಗೆ ಬಂದ ದಾಸ್ತಾನು ಇಳಿಸುವಾಗ ಕಾರ್ಮಿಕರೊಬ್ಬರ ಮೈಮೇಲೆ ಗ್ರಾನೈಟ್ ಬೀಳುವ ಹಂತದಲ್ಲಿತ್ತು. ಅವರಿಗೆ ಗಾಯವಾಗುವುದನ್ನು ತಪ್ಪಿಸಲು ಮುದ್ದಣ್ಣ ನೆರವಿಗೆ ಮುಂದಾದರು. ಆಗ ಅವರ ತಲೆಯ ಮೇಲೆ ಗ್ರಾನೈಟ್ ಬಿದ್ದು ಮೃತಪಟ್ಟರು’ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.