ADVERTISEMENT

ಕಾರವಾರ: ‘ಮಕ್ಕಳ ಸ್ನೇಹಿ ನ್ಯಾಯಾಲಯ’ ಲೋಕಾರ್ಪಣೆ

ಕಾರವಾರದಲ್ಲಿ ರಾಜ್ಯದ ಮೂರನೇ ನ್ಯಾಯಾಲಯವನ್ನು ಉದ್ಘಾಟಿಸಿದ ನ್ಯಾಯಾಧೀಶ ಬಿ.ಎ.ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 12:15 IST
Last Updated 25 ಜನವರಿ 2020, 12:15 IST
ಕಾರವಾರದಲ್ಲಿ ಶನಿವಾರ ‘ಮಕ್ಕಳ ಸ್ನೇಹಿ ನ್ಯಾಯಾಲಯ’ ಕಟ್ಟಡವನ್ನು ಹೈಕೋರ್ಟ್ ನ್ಯಾಯಾಧೀಶ ಬಿ.ಎ.ಪಾಟೀಲ  ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಹಾಗೂ ಸಿವಿಲ್ ನ್ಯಾಯಾಧೀಶರಾದ ವಿಪುಲಾ ಪೂಜಾರಿ ಇದ್ದಾರೆ.
ಕಾರವಾರದಲ್ಲಿ ಶನಿವಾರ ‘ಮಕ್ಕಳ ಸ್ನೇಹಿ ನ್ಯಾಯಾಲಯ’ ಕಟ್ಟಡವನ್ನು ಹೈಕೋರ್ಟ್ ನ್ಯಾಯಾಧೀಶ ಬಿ.ಎ.ಪಾಟೀಲ  ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಹಾಗೂ ಸಿವಿಲ್ ನ್ಯಾಯಾಧೀಶರಾದ ವಿಪುಲಾ ಪೂಜಾರಿ ಇದ್ದಾರೆ.   

ಕಾರವಾರ: ‘ನ್ಯಾಯಾಲಯದಲ್ಲಿ ವಕೀಲರು ಶಿಕ್ಷಕನ ಪಾತ್ರ ವಹಿಸಿದರೆ, ನ್ಯಾಯಾಧೀಶ ಆಲಿಸುವ ಮಗುವಿದ್ದಂತೆ. ಶಿಕ್ಷಕರು ಏನು ಪಾಠ ಮಾಡಾತ್ತಾರೋಅದನ್ನೇ ನ್ಯಾಯಾಧೀಶರು ತೀರ್ಪನ್ನು ನೀಡುತ್ತಾರೆ.ಹಾಗಾಗಿ ವಕೀಲರುಅನುಕಂಪದನೆಲೆಯಲ್ಲಿ ಮಕ್ಕಳ ಸ್ಥಾನದಲ್ಲಿ ನಿಂತು, ಅವರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು’ ಎಂದು ಹೈಕೋರ್ಟ್ ನ್ಯಾಯಾಧೀಶಬಿ.ಎ.ಪಾಟೀಲ ಕಿವಿಮಾತು ಹೇಳಿದರು.

ಅವರು ನಗರದಲ್ಲಿ ಶನಿವಾರ ರಾಜ್ಯದ ಮೂರನೇ ‘ಮಕ್ಕಳ ಸ್ನೇಹಿ ನ್ಯಾಯಾಲಯ’ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

‘ಇಂದು ಜಿಲ್ಲೆಯ ಬಹುದಿನಗಳ ಬೇಡಿಕೆ ಈಡೇರಿದೆ.ಸರ್ವ ಸದಸ್ಯರ ಚಿಂತನೆ ಹಾಗೂ ಶ್ರಮದಿಂದ ಇದು ಸಾಧ್ಯವಾಗಿದೆ. ವಕೀಲರ ಸಂಘದ ಸದಸ್ಯರು, ಯುವ ವಕೀಲರಿಗೆ ಮಾರ್ಗದರ್ಶನ ನೀಡಬೇಕು.ಅವರೊಂದಿಗೆ ಸ್ಪರ್ಧಾತ್ಮಕವಾಗಿ ಮುನ್ನಡೆಸಿ ಉತ್ತಮ ಪ್ರತಿಭೆಗಳನ್ನು ಬೆಳೆಸಲು ಕಿರಿಯರಿಗೆ ಪ್ರೋತ್ಸಾಹ ತುಂಬಬೇಕು. ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ಕಾನೂನಿನ ಬಗ್ಗೆ ಭಯ ಮೂಡಬಾರದು. ಮಕ್ಕಳಿಂದ ಹೇಳಿಕೆ ಪಡೆಯುವಲ್ಲಿ ನ್ಯಾಯಾಧೀಶರಿಗೆ, ವಕೀಲರಿಗೆ ತಾಳ್ಮೆ ಇರಬೇಕು’ ಎಂದು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ‘ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು ವಾತಾವರಣಕ್ಕೆ ತಕ್ಕಂತೆ ಆಮಿಷಕ್ಕೆ ಒಳಗಾಗುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ವಕೀಲರು ಹಾಗೂ ನ್ಯಾಯಾಧೀಶರು ಸೂಕ್ಷ್ಮವಾಗಿ ಗಮನಿಸಿ ನ್ಯಾಯ ನಿರ್ಣಯ ಮಾಡಬೇಕು’ ಎಂದರು.

ಏನಿದರ ವಿಶೇಷ?:‘ಪೊಕ್ಸೊ’ ಮತ್ತುಲೈಂಗಿಕ ದೌರ್ಜನ್ಯದಂತಹಪ್ರಕರಣಗಳ ವಿಚಾರಣೆಗಳು ಈ ನ್ಯಾಯಾಲಯದಲ್ಲಿ ನಡೆಯಲಿವೆ. ಸಂತ್ರಸ್ತ ಮಗು ಮತ್ತು ಅದರ ಪೋಷಕರು ಮಾನಸಿಕ ಒತ್ತಡ ರಹಿತ ವಾತಾವರಣದಲ್ಲಿ ಕಲಾಪಕ್ಕೆ ಹಾಜರಾಗುವಂತೆ ಇಲ್ಲಿ ಸೌಲಭ್ಯಗಳು ಇರಲಿವೆ. ಮಕ್ಕಳು ಯಾವುದೇಭೀತಿಯಿಲ್ಲದೇ ತಮ್ಮ ಸಮಸ್ಯೆಯನ್ನು, ತಮಗಾದ ಅನ್ಯಾಯವನ್ನು ಹೇಳಿಕೊಳ್ಳಬಹುದಾಗಿದೆ.

ಪ್ರಧಾನ ಜಿಲ್ಲಾ ಮತ್ತುಸಿವಿಲ್ನ್ಯಾಯಾಧೀಶರಾದವಿಪುಲಾ ಪೂಜಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಮೊಹಮ್ಮದ್ರೋಶನ್, ವಕೀಲರ ಸಂಘದಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ಎ.ಖಾಜಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಕುಮಾರ ಬರಗುಂಡಿ ಇದ್ದರು. ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ್.ಎಚ್.ನಾಯ್ಕ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.