ಭಟ್ಕಳ: ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಕೋಡ್‌ಫೆಸ್ಟ್ 2025, 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಇತ್ತೀಚಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ದೇಶದಾದ್ಯಂತದ 30 ತಂಡಗಳು ಭಾಗವಹಿಸಿದ್ದವು.
ಒಟ್ಟೂ ಸ್ಪರ್ಧೆಯಲ್ಲಿ ವಿವಿಧ ತಂಡಗಳಿಗೆ ₹2 ಲಕ್ಷ ಮೌಲ್ಯದ ನಗದು ಬಹುಮಾನಗಳನ್ನು ವಿತರಿಸಲಾಯಿತು. ಪ್ರಥಮ ಬಹುಮಾನ ₹60 ಸಾವಿರ ಮಂಗಳೂರಿನ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ರ‍್ಯಾಶ್‌ಮ್ಯಾಕ್ಸ್ ತಂಡದ ಅಬುಲ್ ಖೈರ್ ಪಡೆದುಕೊಂಡರು. ದ್ವಿತೀಯ ಬಹುಮಾನ ₹30 ಸಾವಿರ ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸೈಫರ್ನೋವಾ ತಂಡದ ಹೇಮಂತ್ ಸಿ.ಎಸ್. ಮತ್ತು ಮೊಹಮ್ಮದ್ ಕಮ್ರಾನ್ ಪಡೆದುಕೊಂಡರು. ತೃತೀಯ ಬಹುಮಾನ ₹15 ಸಾವಿರ ದಾವಣಗೆರೆಯ ಜಿ.ಎಂ.ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಸ್ಲರ್ಸ್ ದೇವ್ ತಂಡದ ಅಹಮದ್ ಅಲಿ ಝಡ್, ಸೈಯದ್ ಇಯಾನುಲ್ಲಾ ಮತ್ತು ಎಸ್. ತೇಜಸ್ ತಮ್ಮದಾಗಿಸಿಕೊಂಡರು. ಟಾಪ್ 10 ತಂಡಗಳಿಗೆ ವಿಶೇಷ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ತೀರ್ಪುಗಾರರಾಗಿ ಎ.ಐ.ಟಿ.ಎಂ.ನ ಹಳೆಯ ವಿದ್ಯಾರ್ಥಿಗಳು, ನೀವಿಯಸ್ ಸೊಲ್ಯೂಷನ್ಸ್ ಸಂಸ್ಥಾಪಕ ಮೊಹ್ಸಿನ್ ಖಾನ್, ಎಮರ್ಟೆಕ್ಸ್ ಮಾಹಿತಿ ತಂತ್ರಜ್ಞಾನ ಮುಖ್ಯಸ್ಥ ಮುಬೀನ್ ಜುಕಾಕು, ವಿನ್‌ಟೀಮ್ ಗ್ಲೋಬಲ್ ಸಂಸ್ಥಾಪಕ ವಸೀಮ್ ಅಹ್ಮದ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಜೆ. ಅನ್ವರ್ ಶಾಥಿಕ್ ಮತ್ತು ಪ್ರಾಧ್ಯಾಪಕ ಡೇನಿಯಲ್ ಫ್ರಾನ್ಸಿಸ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ಎ.ಐ.ಟಿ.ಎಂ. ಕಾರ್ಯದರ್ಶಿ ಮೊಹಿದ್ದೀನ್ ರುಕ್ನದ್ದೀನ್, ಸಂಯೋಜಕ ಫಾರ್ಖಲಿತ್ ರಿದಾ ಮಾನ್ವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.