ADVERTISEMENT

ಶಿರಸಿಯಲ್ಲಿ ಸಹಕಾರ ಭವನ ಸ್ಥಾಪನೆ

‘ಶತಮಾನದ ಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಹೆಬ್ಬಾರ ಘೋಷಣೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 14:40 IST
Last Updated 29 ಜನವರಿ 2023, 14:40 IST
ಶಿರಸಿಯ ಟಿ.ಆರ್.ಸಿ. ಸಭಾಂಗಣದಲ್ಲಿ  ಕೆಡಿಸಿಸಿ ಬ್ಯಾಂಕ್‍ನ ಶತಮಾನೋತ್ಸವದ ಸಂಭ್ರಮದ ನೆನಪಿಗೆ ಹೊರತಂದ ‘ಶತಮಾನದ ಸಂಭ್ರಮ’ ಸ್ಮರಣ ಸಂಚಿಕೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಿದರು. ಬ್ಯಾಂಕಿನ ನಿರ್ದೇಶಕರು ಇದ್ದಾರೆ
ಶಿರಸಿಯ ಟಿ.ಆರ್.ಸಿ. ಸಭಾಂಗಣದಲ್ಲಿ  ಕೆಡಿಸಿಸಿ ಬ್ಯಾಂಕ್‍ನ ಶತಮಾನೋತ್ಸವದ ಸಂಭ್ರಮದ ನೆನಪಿಗೆ ಹೊರತಂದ ‘ಶತಮಾನದ ಸಂಭ್ರಮ’ ಸ್ಮರಣ ಸಂಚಿಕೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಿದರು. ಬ್ಯಾಂಕಿನ ನಿರ್ದೇಶಕರು ಇದ್ದಾರೆ   

ಶಿರಸಿ: ‘ಸಹಕಾರ ಕ್ಷೇತ್ರದತ್ತ ಯುವ ಜನತೆಯನ್ನು ಸೆಳೆಯುವ ಜತೆಗೆ ಈ ಕ್ಷೇತ್ರದ ಕುರಿತು ಸೂಕ್ತ ತರಬೇತಿ ನೀಡುವ ಉದ್ದೇಶದೊಂದಿಗೆ ಸಹಕಾರ ಭವನವನ್ನು ಶಿರಸಿಯಲ್ಲಿ ಶೀಘ್ರ ಸ್ಥಾಪಿಸಲಾಗುವುದು’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ಭಾನುವಾರ ಕೆಡಿಸಿಸಿ ಬ್ಯಾಂಕ್‍ನ ಶತಮಾನೋತ್ಸವದ ಸಂಭ್ರಮಾಚರಣೆ ನೆನಪಿಗೆ ಹೊರತರಲಾದ ‘ಶತಮಾನದ ಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಸಹಕಾರ ಸಂಘಗಳು ಸ್ವಾಯತ್ತವಾಗಿದ್ದರೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ರೈತರಿಗೂ ಅನುಕೂಲವಾಗಲಿದೆ. ಸಹಕಾರ ಕ್ಷೇತ್ರ ಬಲಾಢ್ಯವಾಗಿರುವ ಕಡೆಗಳಲ್ಲಿ ರೈತರು ಉತ್ತಮ ಸ್ಥಿತಿಯಲ್ಲಿದ್ದಾರೆ. ಉತ್ತರ ಕನ್ನಡದಲ್ಲಿ ಈ ಕ್ಷೇತ್ರ ಬಲವಾಗಿ ಬೇರೂರಿದೆ’ ಎಂದರು.

ADVERTISEMENT

ಸಹಕಾರ ಕ್ಷೇತ್ರದ ಪ್ರಮುಖ ಜಿ.ಟಿ.ಹೆಗಡೆ ತಟ್ಟೀಸರ, ‘ಸಾಮಾನ್ಯ ಜನರಿಗೂ ಸಹಕಾರ ಕ್ಷೇತ್ರದ ಬಗ್ಗೆ ಜ್ಞಾನ ಮೂಡಬೇಕು. ಶಾಲಾ ಪಠ್ಯಗಳಲ್ಲಿಯೂ ಸಹಕಾರ ತತ್ವಗಳ ಬಗ್ಗೆ ಪಾಠ ಬರಬೇಕು’ ಎಂದರು.

ಸ್ಮರಣ ಸಂಚಿಕೆಯ ಸಂಪಾದಕ ಎಸ್.ಪಿ.ಶೆಟ್ಟಿ, ‘ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಆರ್ಥಿಕ ಸಂಕಷ್ಟದ ಸ್ಥಿತಿ ತಲುಪಿದ್ದಾಗ ಡಿಸಿಸಿ ಬ್ಯಾಂಕ್ ನೆರವಿಗೆ ನಿಂತಿದೆ. ಡಿಸಿಸಿ ಬ್ಯಾಂಕ್‍ಗೆ ಪ್ರಾಮುಖ್ಯತೆ ನೀಡದೆ ಸಹಕಾರ ಸಂಘಗಳು ಪರ್ಯಾಯ ಮಾರ್ಗದಲ್ಲಿ ನಡೆಯುವುದು ಸೂಕ್ತವಲ್ಲ’ ಎಂದರು.

ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಜಿ.ಆರ್.ಹೆಗಡೆ ಸೋಂದಾ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಆರ್.ಎಂ.ಹೆಗಡೆ ಬಾಳೇಸರ, ರಾಮಕೃಷ್ಣ ಹೆಗಡೆ ಕಡವೆ, ಎಲ್.ಟಿ.ಪಾಟೀಲ, ಪ್ರಮೋದ ಢವಳೆ, ಕೃಷ್ಣ ದೇಸಾಯಿ, ರಾಘವೇಂದ್ರ ಶಾಸ್ತ್ರಿ, ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.