ADVERTISEMENT

ಕಾರವಾರ | ನದಿಯಲ್ಲಿ ಯುವಕ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 14:06 IST
Last Updated 25 ಮೇ 2025, 14:06 IST
ಸಂತೋಷ ರಾಯ್ಕರ್
ಸಂತೋಷ ರಾಯ್ಕರ್   

ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮದ ಯುವಕನೋರ್ವ ಇಲ್ಲಿನ ಸುಂಕೇರಿ ಬಳಿ ಶನಿವಾರ ರಾತ್ರಿ ಕಾಳಿನದಿಯಲ್ಲಿ ಮುಳುಗಿ ಕಣ್ಮರೆಯಾಗಿದ್ದಾರೆ.

ಸಂತೋಷ ರಾಯ್ಕರ್ (32) ಕಣ್ಮರೆಯಾಗಿರುವ ಯುವಕ. ನದಿಗೆ ಬಿದ್ದ ಮೊಬೈಲ್ ತೆಗೆಯಲು ಪ್ರಯತ್ನಿಸಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದ ಎಂದು ಪ್ರತ್ಯಕ್ಷದರ್ಶಿಗಳ ದೂರು ಆಧರಿಸಿ, ಪೊಲೀಸರು ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಕ್ರಿಕೆಟ್ ಉದ್ಘೋಷಕರಾಗಿ ಹೆಸರು ಮಾಡಿದ್ದ ಸಂತೋಷ್ ತಾಲ್ಲೂಕಿನಲ್ಲಿ ಚಿರಪರಿಚಿತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT