ADVERTISEMENT

ಬೆಳೆ ವಿಮೆ ನೋಂದಣಿಗೆ ಆ. 11 ಕೊನೆ ದಿನಾಂಕ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 7:17 IST
Last Updated 30 ಜುಲೈ 2025, 7:17 IST
<div class="paragraphs"><p>ರಬಕವಿ ಬನಹಟ್ಟಿ ತಾಲ್ಲೂಕಿನ ನಾವಲಗಿ ಹದ್ದಿಯಲ್ಲಿಯ ಕಾಲುವೆಯನ್ನು ಮುಚ್ಚಿ ಮೇಲೆ ಬೆಳೆ ಬೆಳೆದಿರುವುದು</p></div>

ರಬಕವಿ ಬನಹಟ್ಟಿ ತಾಲ್ಲೂಕಿನ ನಾವಲಗಿ ಹದ್ದಿಯಲ್ಲಿಯ ಕಾಲುವೆಯನ್ನು ಮುಚ್ಚಿ ಮೇಲೆ ಬೆಳೆ ಬೆಳೆದಿರುವುದು

   

ಸಿದ್ದಾಪುರ: 2025ರ ಮುಂಗಾರು ಋತುವಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತಾಲ್ಲೂಕಿನ ರೈತರು ನೋಂದಾಯಿಸಿಕೊಳ್ಳಲು ಆಗಸ್ಟ್ 11 ಅಂತಿಮ ದಿನವಾಗಿದೆ.

ಅಡಿಕೆ ಬೆಳೆಗೆ ₹51,200 ಒಟ್ಟೂ ವಿಮಾ ಮೊತ್ತ (ಪ್ರತಿ ಎಕರೆಗೆ) ಇದ್ದು, ರೈತರು ₹2,591 ಕಂತನ್ನು ಪಾವತಿಸಬೇಕು. ಅಂತೆಯೇ ಕಾಳುಮೆಣಸು ಬೆಳೆಗೆ ₹18,800 ಒಟ್ಟೂ ವಿಮಾ ಮೊತ್ತ (ಪ್ರತಿ ಎಕರೆಗೆ) ಇದ್ದು, ರೈತರು ₹952 ಕಂತನ್ನು ಪಾವತಿಸಬೇಕು.

ADVERTISEMENT

ತಾಲ್ಲೂಕಿಗೆ ರಿಲಯನ್ಸ್‌ ಜನರಲ್‌ ಇನ್ಶೂರನ್ಸ್‌ ಕಂಪನಿ ಲಿ. ಅಧಿಸೂಚಿತ ವಿಮಾ ಅನುಷ್ಠಾನ ಸಂಸ್ಥೆಯಾಗಿದ್ದು, ಬೆಳೆ ಸಾಲ ಪಡೆದ ರೈತರು ಸಂಬಂಧಿತ ಬ್ಯಾಂಕ್‌ಗಳ ಮೂಲಕ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕ್/ ಸಾಮಾನ್ಯ ಸೇವಾಕೇಂದ್ರ / ಗ್ರಾಮ ಒನ್ ಕೇಂದ್ರಗಳ ಮೂಲಕ ಈ ಯೋಜನೆಯಡಿ ನೋಂದಾಯಿಸಬಹುದು. ಎಫ್.ಐ.ಡಿ ಕಡ್ಡಾಯವಾಗಿರುತ್ತದೆ.

ಬೆಳೆ ಸಾಲ ಪಡೆಯುವ ರೈತರು ಅಂತಿಮ ದಿನಾಂಕದ ಒಂದು ವಾರದ ಒಳಗಾಗಿ ಸಂಬಂಧಿತ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಈ ಯೋಜನೆಯಿಂದ ಹೊರಗುಳಿಯಲು ಲಿಖಿತವಾಗಿ ತಿಳಿಸಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.