
ದಾಂಡೇಲಿ: ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವದ ಕಾರ್ಯಕ್ರಮ ಜ.28 ಸಂಜೆ 6 ಗಂಟೆಗೆ ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಡಿಲಕ್ಸ್ ಸಭಾಭವನದಲ್ಲಿ ನಡೆಯಲ್ಲಿದೆ ಎಂದು ಲಯನ್ ಕ್ಲಬ್ ಅಧ್ಯಕ್ಷೆ ಗೌರಿ ಹಂಚಿನಾಳಮಠ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಲಯನ್ಸ್ ಕ್ಲಬ್‌ನ ಜಿಲ್ಲಾ ಪದಾಧಿಕಾರಿ ಶೇಖರ ಹಂಚಿನಾಳಮಠ ಮಾತನಾಡಿ, ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್‌ನ ಡಿಸ್ಟ್ರಿಕ್ಟ್ ಗವರ್ನರ್ ಪಿಎಂಜೆಎಫ್ ಜೈಅಮೊಲ್ ನಾಯ್ಕ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಭಾಗವಹಿಸಲಿದ್ದಾರೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ರಾಜಶೇಖರ ಹಿರೇಮಠ, ಉಲಾರಿಕೊ ರೋಡರಿಗ್ಸ್, ಮೊನಿಕಾ ಸಾವಂತ್, ಕೀರ್ತಿ ನಾಯ್ಕ್ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಘದ ಕಾರ್ಯದರ್ಶಿ ರುಬಿನಾ ಕೌಸರ್ ಅತ್ತಾರ, ಖಜಾಂಚಿ ಸುಮಂಗಲಾ ಚಿಕ್ಕಮಠ, ಕ್ಲಬ್ ಸದಸ್ಯ ಉದಯ ಶೆಟ್ಟಿ, ಇಮ್ತಿಯಾಜ ಅತ್ತಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.