ADVERTISEMENT

ದಾಂಡೇಲಿ ನಗರಸಭೆ ವಾರ್ಡ್ ಉಪ ಚುನಾವಣೆ: ಕಾಂಗ್ರೆಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 4:30 IST
Last Updated 6 ಸೆಪ್ಟೆಂಬರ್ 2021, 4:30 IST
 ಕಾಂಗ್ರೆಸ್ ಅಭ್ಯರ್ಥಿ ಮಹಾದೇವ ಜಮಾದಾರಗೆ ಜಯ
ಕಾಂಗ್ರೆಸ್ ಅಭ್ಯರ್ಥಿ ಮಹಾದೇವ ಜಮಾದಾರಗೆ ಜಯ   

ದಾಂಡೇಲಿ: ನಗರಸಭೆಯ ವಾರ್ಡ್ ನಂಬರ್ 11ರ ಉಪಚುನಾವಣೆ ಫಲಿತಾಂಶ ಸೋಮವಾರ ಹೊರಬಿದ್ದಿದೆ. 191 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮಹಾದೇವ ಜಮಾದಾರ ಜಯಶಾಲಿಯಾಗಿದ್ದಾರೆ.

ನಗರದ ಬಂಗೂರನಗರ ಪದವಿ ಪೂರ್ವ ಕಾಲೇಜಿನಲ್ಲಿ 146 ಮತ್ತು 147 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಶೇಕಡಾ 56.61ರಷ್ಟು ಮತದಾನವಾಗಿತ್ತು. ಒಟ್ಟು 1,662 ಮತದಾರರಲ್ಲಿ 941 ಮತದಾರರು ಹಕ್ಕನ್ನು ಚಲಾಯಿಸಿದ್ದರು.

ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಆದಂ ದೇಸೂರ ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿದ್ದು , ಕಾಂಗ್ರೆಸ್ ಅಭ್ಯರ್ಥಿ ಮಹಾದೇವ ಜಮಾದಾರ, ಬಿಜೆಪಿಯ ಅಭ್ಯರ್ಥಿ ಗೋಪಾಲ ಸಿಂಗ್ ಕಣದಲ್ಲಿ ಇದ್ದರು.

ADVERTISEMENT

ಒಟ್ಟು ಚಲಾವಣೆಯಾದ ಮತಗಳು 941ರಲ್ಲಿ ಕಾಂಗ್ರೆಸ್ ಪಕ್ಷ 561 ಮತಗಳನ್ನು ಪಡೆದರೆ, ಬಿಜೆಪಿ ಪಕ್ಷ 370 ಮತಗಳನ್ನು ಪಡೆದು ಪರಾಭವಗೊಂಡದೆ. ಇದರಲ್ಲಿ 10 ನೋಟಾ ಮತಗಳು ಚಲಾವಣೆಯಾಗಿವೆ.

ಪಕ್ಷಗಳ ಬಲಾಬಲ: ದಾಂಡೇಲಿಯ ನಗರಸಭೆಯಲ್ಲಿ 31 ವಾರ್ಡುಗಳಲ್ಲಿ 16 ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ನಾಲ್ವರು ಪಕ್ಷೇತರರು ಬೆಂಬಲವನ್ನು ನೀಡಿದ್ದಾರೆ.

ಪ್ರಸ್ತುತ ಬಿಜೆಪಿ 11 ಸ್ಥಾನಗಳನ್ನು ಹೊಂದಿದ್ದು, ಈ ಒಂದು ಸ್ಥಾನವನ್ನು ಗೆದ್ದುಕೊಂಡರೆ 12 ಸ್ಥಾನಗಳನ್ನು ಪಡೆದುಕೊಂಡಂತಾಗುತ್ತಿತ್ತು. ಇದರೊಂದಿಗೆ 4 ಪಕ್ಷೇತರ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೆಳೆದು ಅಧಿಕಾರಕ್ಕೆ ಬರುವ ಲೆಕ್ಕಾಚಾರದಲ್ಲಿ ಬಿಜೆಪಿಗೆ ನಿರಾಶೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.