ದಾಂಡೇಲಿ: ಮಹಿಳೆಯರು ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದನ್ನು ವಿರೋಧಿಸಿ ನಗರದ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಕಪ್ಪು ಉಡುಗೆ ಧರಿಸಿದ ಮೇಣದಬತ್ತಿಗಳನ್ನು ಬೆಳಗಿಸಿ ಮೌನ ಆಚರಿಸಲಾಯಿತು.
ವುಮೆನ್ ಇನ್ ಬ್ಲಾಕ್ ಹೋರಾಟದ ನೆನಪು ಮತ್ತು ಸಮಸ್ತ ಮಹಿಳಾ ಹಕ್ಕೊತ್ತಾಯಗಳನ್ನು ಮಂಡಿಸಲು ವಿದ್ಯಾರ್ಥಿನಿಯರು ಮಹಿಳಾ ಅರಿವಿನ ಸಂದೇಶಗಳನ್ನು ಸಾರಿ, ಮಹಿಳಾಪರವಾದ ಹಾಡುಗಳನ್ನು ಹಾಡಿದರು.
ಮಹಿಳಾ ಪರವಾದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಹಿತ ಸಾಧ್ಯವಾಗಿದೆಯೇ ಎಂಬ ವಿಷಯದಲ್ಲಿ ಚರ್ಚಾ ಸ್ಪರ್ಧೆ ಆಯೋಜಿಸಲಾಗಿತ್ತು. ಚಂದ್ರಿಕಾ ಪಾವನೆ ಪ್ರಥಮ, ಯಶೋದಾ, ನಾಗರತ್ನಾ ದ್ವಿತೀಯ, ಸಂಗೀತಾ ಬೇಡಕೆ, ಗಂಗಾಧರ ತೃತೀಯ ಹಾಗೂ ಭಾವನಾ ಸಮಾಧಾನಕರ ಬಹುಮಾನ ಪಡೆದರು.
ವಿನಯಾ ಜಿ. ನಾಯಕ, ನಿಷತ್ ಶರೀಫ್, ಚಂದ್ರಶೇಖರ ಲಮಾಣಿ, ಬಸವರಾಜ ಹೂಲಿಕಟ್ಟಿ ಇದ್ದರು. ಪ್ರಾಂಶುಪಾಲ ಎಂ.ಡಿ. ಒಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಉಷಾ ನಾಯಕ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.