ADVERTISEMENT

ಉತ್ತರ ಕನ್ನಡ: ಚುನಾವಣೆಯ ಅಂತಿಮ ಸಿದ್ಧತೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 13:13 IST
Last Updated 19 ಏಪ್ರಿಲ್ 2019, 13:13 IST
ಕುಮಟಾದ ಎ.ವಿ.ಬಾಳಿಗಾ ವಿದ್ಯಾಸಂಸ್ಥೆಯಲ್ಲಿ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಮಾಡಿಕೊಂಡಿರುವ ಅಂತಿಮ ಸಿದ್ಧತೆಯನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್ ಶುಕ್ರವಾರ ಪರಿಶೀಲಿಸಿದರು
ಕುಮಟಾದ ಎ.ವಿ.ಬಾಳಿಗಾ ವಿದ್ಯಾಸಂಸ್ಥೆಯಲ್ಲಿ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಮಾಡಿಕೊಂಡಿರುವ ಅಂತಿಮ ಸಿದ್ಧತೆಯನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್ ಶುಕ್ರವಾರ ಪರಿಶೀಲಿಸಿದರು   

ಕಾರವಾರ:ಲೋಕಸಭೆಚುನಾವಣೆಗೆಕುಮಟಾ ಮತ್ತು ಭಟ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಅಂತಿಮ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾಧಿಕಾರಿಡಾ.ಕೆ.ಹರೀಶ ಕುಮಾರ್ಶುಕ್ರವಾರ ಪರಿಶೀಲಿಸಿದರು.

ಕುಮಟಾದ ಮತ ಎಣಿಕೆ ಕೇಂದ್ರಕ್ಕೂಭೇಟಿ ನೀಡಿದರು. ತಾಲ್ಲೂಕು ಕೇಂದ್ರದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಸಂಚಾರ ಜಾಗೃತಿ ದಳದ ನೋಡಲ್ ಅಧಿಕಾರಿಗಳು, ಮಾದರಿ ನೀತಿ ಸಂಹಿತೆಯ ಸಹಾಯಕ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.

‘ಏ.21ರಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ ಎಚ್ಚರ ವಹಿಸಬೇಕು. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್, ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿ ನಿರ್ವಹಣೆ ಸೇರಿದಂತೆ ವಿವಿಧ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ಚುನಾವಣೆಗೆಸಂಬಂಧಿಸಿದಂತೆಗೊಂದಲಗಳಿದ್ದಲ್ಲಿ ತಕ್ಷಣ ಮಾಹಿತಿಯನ್ನು ರವಾನಿಸಬೇಕು. ಅದಕ್ಕೆ ಸಂಬಂಧಿಸಿದ ಪರ್ಯಾಯ ವ್ಯವಸ್ಥೆ ಮಾಡುವುದು ಸಹಾಯಕ ಚುನಾವಣಾಧಿಕಾರಿಗಳ ಜವಾಬ್ದಾರಿ’ ಎಂದು ಅವರು ಹೇಳಿದರು.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ವಿಶೇಷವಾಗಿ ಅಂಗವಿಕಲಮತದಾರರಿಗೆಸೌಲಭ್ಯ ಕಲ್ಪಿಸುವ ಸಂಬಂಧ ವಿಶೇಷ ಗಮನ ಹರಿಸಬೇಕು. ಚುನಾವಣಾ ವೀಕ್ಷಕರು ಹಾಗೂ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಕೋರುವ ಮಾಹಿತಿಯನ್ನು ತಕ್ಷಣ ಕೊಡಲು ತಯಾರಿರಬೇಕು ಎಂದರು.

ಕುಮಟಾಉಪ ವಿಭಾಗಾಧಿಕಾರಿಪ್ರೀತಿ ಗೆಹ್ಲೋಟ್, ಐಎಎಸ್ ಪ್ರೊಬೆಷನರ್ ದಿಲೀಶ್ ಸಸಿಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.