ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಬೈಲೂರು ನಿವಾಸಿ ಮಾಸ್ತಪ್ಪ ನಾಯ್ಕ ವಿರುದ್ದ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 29ರಂದು ಮಾಸ್ತಪ್ಪ ನಾಯ್ಕ ಅವರು ತಮ್ಮ ಫೇಸಬುಕ್ ಖಾತೆಯಲ್ಲಿ ಮಂಕಾಳ ವೈದ್ಯ ಅವರು ಭ್ರಷ್ಟಚಾರ ಸಚಿವರು ಎಂದು ಬೈಲೂರಿನ ಸರ್ವೇ ನಂಬರ್ 600ರಲ್ಲಿ 30 ಎಕರೆ ಜಾಗವನ್ನು ಅತಿಕ್ರಮಣ ಮಾಡಲು ಬೀನಾ ವೈದ್ಯ ಎಜೆಕೇಶನ್ ಟ್ರಸ್ಟ್ ಹೆಸರಿನಲ್ಲಿ ಗ್ರಾಮ ಪಂಚಾಯ್ತಿಗೆ ಅರ್ಜಿಸಲ್ಲಿಸಿದ್ದಾರೆ ಎಂದು ಸಚಿವರು ಬೇನಾಮಿ ಆಸ್ತಿಯಲಿ ಮುಳುಗಿ ಹೋಗಿದ್ದಾರೆ ಎಂದು ಪೋಸ್ಟ್ ಮಾಡಿದ್ದರು.
ಮೇ 30ರಂದು ಬೈಲೂರು ಗ್ರಾಮ ಪಂಚಾಯ್ತಿಯಲ್ಲಿ ನಡೆಯುವ ಗ್ರಾಮಸಭೆಯಲ್ಲಿ ಇದಕ್ಕೆ ವಿರೋಧ ವ್ಯಕ್ತಡಪಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು. ಸಚಿವರ ಬಗ್ಗೆ ಅಸಂಬದ್ದ ಪದಗಳನ್ನು ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಚಿವರನು ಅವಮಾನಿಸಿದ ಬಗ್ಗೆ ಪೊಲೀಸ್‌ಕಾನಸ್ಟೇಬಲ್ ವಿಜಯ ನಾಯ್ಕ ಅವರಿಂದ ಸುಮೋಟೋ ಕೇಸ್ ದಾಖಲಿಸಿಕೊಂಡ ಮುರುಡೇಶ್ವರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅವಹೇಳನ: ದೂರು
ಭಟ್ಕಳ: ಬೈಲೂರು ನಿವಾಸಿ ಮಂಜುನಾಥ ನಾಯ್ಕ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹೊನ್ನಾವರ ನಿವಾಸಿ ತೇಜು ನಾಯ್ಕ ವಿರುದ್ದ ಮಂಜುನಾಥ ನಾಯ್ಕ ಮುರುಡೇಶ್ವರ ಪೊಲೀಸ್ ಠಾಣೆಯಲಿ ದೂರು ದಾಖಲಿಸಿದ್ದಾರೆ.
ತೇಜು ನಾಯ್ಕ ಹೊನ್ನಾವರ ಅವರು ಮೇ 29ರಂದು ತಮ್ಮ ಪೇಸ್ ಬುಕ್ ಅಕೌಂಟಿನಲ್ಲಿ ನನ್ನ ಬಗ್ಗೆ ಅವಹೇಳನಕಾರಿ ಪದ ಬಳಸಿ ಪೋಸ್ ಹಾಕಿದ್ದಾರೆ. ಈತಹ ಪೋಸ್ಟ್‌ಗೆ ಬೂಲೂರು ಸಣಬಲ್ಸೆ ನಿವಾಸಿ ಭಾಸ್ಕರ ದೇವಾಡಿಗ ಸಹ ನನ್ನ ಬಗ್ಗೆ ಅವಮಾನವಾಗುವ ಹಾಗೆ ಬೇರೆ, ಬೇರೆ ರೀತಿಯಲಿ ಕಮೆಂಟ್ ಮಾಡಿದ್ದಾರೆ ಎಂದೂ ದೂರಿನಲ್ಲಿ ದಾಖಲಿಸಿದ್ದಾರೆ.
ಮುರುಡೇಶ್ವರ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.