ADVERTISEMENT

ದಾಂಡೇಲಿ: ನವಗ್ರಾಮದಲ್ಲಿ ಆನೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 15:56 IST
Last Updated 11 ಮಾರ್ಚ್ 2023, 15:56 IST
ದಾಂಡೇಲಿಯ ಗೌಂಟನ್ ದ ನವಗ್ರಾಮದ ಸಮೀಪ ಕಾಣಿಸಿಕೊಂಡ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಮರಳಿಸಿದರು.
ದಾಂಡೇಲಿಯ ಗೌಂಟನ್ ದ ನವಗ್ರಾಮದ ಸಮೀಪ ಕಾಣಿಸಿಕೊಂಡ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಮರಳಿಸಿದರು.   

ದಾಂಡೇಲಿ: ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವಗ್ರಾಮದಲ್ಲಿ ಆನೆಯೊಂದು ಶನಿವಾರ ಸಂಜೆ ಕಾಣಿಸಿಕೊಂಡಿದ್ದು ಜನರು ಆತಂಕಗೊಂಡರು.

ಗ್ರಾಮದ ಜನವಸತಿ ಪ್ರದೇಶದ ಹತ್ತಿರದಲ್ಲಿರುವ ಹೊಲಕ್ಕೆ ಬಂದಿದ್ದು, ಬೆಳೆಗಳನ್ನು ನಾಶ ಪಡಿಸಿದೆ. ಭಯಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಅರಣ್ಯದತ್ತ ಅಟ್ಟಿಸಿದ್ದಾರೆ.

ಎ.ಸಿ.ಎಫ್ ಜಿ.ಕೆ.ಶೆಟ್, ಆರ್.ಎಫ್.ಓ ಅಪ್ಪಾಜಿರಾವ ಕಲಶೆಟ್ಟಿ, ಡಿ.ಆರ್.ಎಫ್.ಒ ಲೊಕೇಶ, ಸಂದೀಪ ಗೌಡಾ, ವೀರೇಶ, ಹುಸೇನ, ಕೆಟಿಆರ್ ವನ್ಯಜೀವಿ ಸಂಶೋಧನಾ ಕೇಂದ್ರದ ಇಮ್ರಾನ್, ಸಿಪಿಐ ಬಿ.ಎಸ್.ಲೊಕಾಪುರ, ಗ್ರಾಮೀಣ ಠಾಣೆಯ ಪಿಎಸ್ಐ ಕೃಷ್ಣಗೌಡ ಅರಿಕೆರ ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.