ADVERTISEMENT

ಮದ್ಯದ ಅಕ್ರಮ ದಾಸ್ತಾನು ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 20:15 IST
Last Updated 24 ಆಗಸ್ಟ್ 2020, 20:15 IST
ಕಾರವಾರದ ಅಬಕಾರಿ ಅಧಿಕಾರಿಗಳು ಮದ್ಯದ ಅಕ್ರಮ ದಾಸ್ತಾನನ್ನು ದಾಳಿ ನಡೆಸಿ ವಶಪಡಿಸಿಕೊಂಡಿರುವುದು
ಕಾರವಾರದ ಅಬಕಾರಿ ಅಧಿಕಾರಿಗಳು ಮದ್ಯದ ಅಕ್ರಮ ದಾಸ್ತಾನನ್ನು ದಾಳಿ ನಡೆಸಿ ವಶಪಡಿಸಿಕೊಂಡಿರುವುದು   

ಕಾರವಾರ: ತಾಲ್ಲೂಕಿನ ಮಲ್ಲಾಪುರದ ಲಕ್ಷ್ಮೀ ನಗರದಲ್ಲಿ ಶೆಡ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಈಚೆಗೆ ಜಪ್ತಿ ಮಾಡಿದ್ದಾರೆ.

ಪಣೀಕರ ಎಂಬುವವರ ಶೆಡ್‌ನಲ್ಲಿ ಅಂದಾಜು ₹ 85,300 ಮೌಲ್ಯದ 184 ಲೀಟರ್ ಗೋವಾ ಮದ್ಯ ಹಾಗೂ 99 ಲೀಟರ್ ಗೋವಾ ಫೆನ್ನಿಯನ್ನು ದಾಸ್ತಾನು ಇಡಲಾಗಿತ್ತು. ಅಮದಳ್ಳಿ ಗ್ರಾಮದ ಗಾಂವ್ಕರವಾಡದಲ್ಲಿ ಕೂಡ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವಿಷ್ಣು ಅನಂತ ತಳೇಕರ ಅವರ ಮನೆಯ ಹಿಂದೆ ಇರುವ ಶೆಡ್‌ನಲ್ಲಿ ಇಡಲಾಗಿದ್ದ ₹ 90,300 ಮೌಲ್ಯದ ಸುಮಾರು 203 ಲೀಟರ್ ಗೋವಾ ಮದ್ಯ, 40 ಲೀಟರ್ ಗೋವಾ ಬಿಯರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.

ADVERTISEMENT

ಕಾರ್ಯಾಚರಣೆಯಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಗಣೇಶ ನಾಯ್ಕ, ಸಿಬ್ಬಂದಿ ಪ್ರವೀಣ ಕುಮಾರ ಕಲ್ಲೋಳಿ, ಶಿವಾನಂದ ಕೋರಡ್ಡಿ, ನಾಗರಾಜ ಹೂವಿನಾಳ, ವೀರೇಶ ಕುರಿ, ವಾಹನ ಚಾಲಕ ರವಿಚಂದ್ರ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.