ADVERTISEMENT

ಪತ್ರಿಕಾ ವಿತರಕರಿಗೆ ಮುಖಗವಸು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 14:02 IST
Last Updated 24 ಮಾರ್ಚ್ 2020, 14:02 IST

ಶಿರಸಿ: ನಿತ್ಯ ಬೆಳಗಾಗುವಷ್ಟರಲ್ಲಿ ಮನೆಯ ಬಾಗಿಲಿಗೆ ದಿನಪತ್ರಿಕೆಗಳನ್ನು ತಂದು ಕೊಡುವ ಪತ್ರಿಕಾ ಏಜೆಂಟರು, ವಿತರಕರು ಸುರಕ್ಷತೆಯ ದೃಷ್ಟಿಯಿಂದ ಮುಖಗವಸು ಹಾಗೂ ಕೈ ಗ್ಲೌಸ್ ಹಾಕಿ ಪತ್ರಿಕೆಗಳನ್ನು ವಿತರಿಸಲಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ಪತ್ರಿಕೆಗಳನ್ನು ಮುಕ್ತವಾಗಿಡಲು, ಪತ್ರಿಕೆಗಳು ಮುದ್ರಣವಾದ ಮೇಲೆ ಪ್ರತಿದಿನ ಸೋಂಕು ನಿವಾರಕಗಳ ಸಿಂಪಡಣೆ ಮಾಡಲಾಗುತ್ತದೆ. ಸುರಕ್ಷಿತವಾಗಿ ಬಂದಿರುವ ಪತ್ರಿಕೆಗಳನ್ನು, ಅಷ್ಟೇ ಸುರಕ್ಷಿತವಾಗಿ ಓದುಗರಿಗೆ ತಲುಪಿಸುವ ಜೊತೆಗೆ, ಸ್ವ ಸುರಕ್ಷೆಯ ದೃಷ್ಟಿಯಿಂದ ವಿತರಕರು ಮಂಗಳವಾರ ಇಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಪತ್ರಿಕೆ ವಿತರಣೆ ಆರಂಭಿಸುವಾಗ ಸ್ಯಾನಿಟೈಸರ್ ಬಳಕೆಯನ್ನು ಅಳವಡಿಸಿಕೊಂಡಿದ್ದಾರೆ.

ಪ್ರಮುಖರಾದ ವಿವೇಕ ರಾಯಕರ, ಮಾರುತಿ ಮಡಿವಾಳ, ರಾಘವೇಂದ್ರ ನಾಯ್ಕ, ಕೃಷ್ಣಮೂರ್ತಿ, ಸತೀಶ ರಾವ್, ವಿವೇಕ ರಾಯಕರ, ಮೋಹನ ನಾಯ್ಕ, ಧಾರೇಶ್ವರ, ಜಗದೀಶ ಕಲ್ಮಠ, ಗಣೇಶ ಪ್ರಭು ಮೊದಲಾದವರು ಈ ವಿಷಯ ಚರ್ಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.