ಯಲ್ಲಾಪುರ: ಮೀನು ಹಿಡಿಯಲು ಹೋದ ತಂದೆ ಮತ್ತು ಮಗ ಆಕಸ್ಮಿಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅಪ್ಪೆಕೊಡಿ ಗ್ರಾಮದ ಬೇಡ್ತಿ ನದಿಯಲ್ಲಿ ಗುರುವಾರ ಸಂಭವಿಸಿದ್ದು, ಮೃತದೇಹವನ್ನು ಶುಕ್ರವಾರ ನೀರಿನಿಂದ ಮೇಲೆತ್ತಲಾಗಿದೆ.
ಕಂಪ್ಲಿ-ಹಳ್ಳಿಗದ್ದೆ ನಿವಾಸಿಗಳಾದ ಕಲಂದರ ಪಕ್ರು ಸಾಬ (51) ಹಾಗೂ ಅಬ್ಬುಲ್ ಖಾದರ್ ಕಲಂದರ ಸಾಬ (21) ಮೃತರು.
`ಇವರು ಗುರುವಾರ ಸಂಜೆ 4 ಗಂಟೆಯ ಸುಮಾರಿಗೆ ಬೇಡ್ತಿ ನದಿ ಹರಿಯುವ ಅಪ್ಪೆಕೊಡಿ ಸಮೀಪ ನಿಂತ ನೀರಲ್ಲಿ ಮೀನು ಹಿಡಿಯಲು ಹೋಗಿದ್ದರು. ರಾತ್ರಿಯಾದರೂ ಮನೆಗೆ ಬರದಿದ್ದರಿಂದ ಅನುಮಾನಗೊಂಡು ಹುಡುಕಾಟ ನಡೆಸಿದಾಗ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು ತಿಳಿಯಿತು. ನದಿ ನೀರಲ್ಲಿ ಬಿದ್ದವರ ಮೃತದೇಹವನ್ನು ಊರಿನವರೇ ಆದ ಹಸನಸಾಬ ಮುಜಾವರ, ನಿಸ್ಸಾರ ಜಂಡೆವಾಲೆ, ಮಂಚಿಕೇರಿಯ ಖಲೀಲ ಮೊದಲಾದವರು ನೀರಿನಿಂದ ಮೇಲಕ್ಕೆ ತಂದು ನದಿಯ ದಡದಲ್ಲಿ ಇಟ್ಟಿದ್ದಾರೆ’ ಎಂದು ಹಳ್ಳಿಗದ್ದೆಯ ಮಮ್ತಾಜಬಿ ಕಲಂದರ ಸಾಬ ಯಲ್ಲಾಪುರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.