ADVERTISEMENT

ಅಗ್ನಿ ಶಾಮಕ ಸೇವಾ ಸಪ್ತಾಹ 14ರಿಂದ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 16:03 IST
Last Updated 11 ಏಪ್ರಿಲ್ 2025, 16:03 IST

ಪ್ರಜಾವಾಣಿ ವಾರ್ತೆ

ಕಾರವಾರ: ಅಗ್ನಿಶಾಮಕ ಸೇವಾ ಇಲಾಖೆಯು ಏ.14 ರಿಂದ 20ರ ವರೆಗೆ ಅಗ್ನಿ ಶಾಮಕ ಸೇವಾ ಸಪ್ತಾಹವನ್ನು ‘ಅಗ್ನಿ ಸುರಕ್ಷಿತ ಭಾರತವನ್ನು ಹುಟ್ಟು ಹಾಕಲು ಒಂದಾಗೋಣ’ ಎಂಬ ಘೋಷವಾಕ್ಯದೊಂದಿಗೆ ಆಚರಿಸುತ್ತಿದೆ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

‘14 ರಂದು ಅಗ್ನಿಶಮನ ಕರ್ತವ್ಯ ನಿರ್ವಹಿಸುವಾಗ ವೀರ ಮರಣ ಹೊಂದಿದವರಿಗೆ ಹುತ್ಮಾತ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಉಳಿದ ದಿನಗಳಲ್ಲಿ ಅಗ್ನಿ ನಿವಾರಣೆ ಮತ್ತು ಅಗ್ನಿಶಮನದ ಬಗ್ಗೆ ತಿಳಿವಳಿಕೆ ಹಾಗೂ ಅಣಕು ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಬೆಂಕಿ ಅಪಘಾತವಾದಾಗ ತಕ್ಷಣವೇ ಹತ್ತಿರದ ಅಗ್ನಿ ಶಾಮಕ ಠಾಣೆಗೆ ವಿಷಯ ತಿಳಿಸಲು 112 ಅಥವಾ ಕಾರವಾರ (08382 226655), ಕುಮಟಾ (08386-224567), ಶಿರಸಿ (08384 235301), ಭಟ್ಕಳ (08385/222140), ಹಳಿಯಾಳ (08284-221432), ಅಂಕೋಲಾ (08388-230888), ಹೊನ್ನಾವರ (08387-220888), ಮುಂಡಗೋಡ (08387-220888), ಯಲ್ಲಾಪುರ (08419-261236), ಸಿದ್ದಾಪುರ (08389-291101), ಜೋಯಿಡಾ (08383-282701) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.