ಶಿರಸಿ: ಜಾನುವಾರುಗಳು ರೈತರ ಬದುಕಿಗೆ ಅನಿವಾರ್ಯ ಎಂಬುದನ್ನು ಅರಿತ ಸರ್ಕಾರ ಮಾರಕ ಕಾಲು ಮತ್ತು ಬಾಯಿ ರೋಗದ ನಿಯಂತ್ರಣಕ್ಕೆ ಮುಂದಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7 ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕೆ ಹಾಗೂ ದನಗಳಿಗೆ ಚರ್ಮಗಂಟು ರೋಗದ ಲಸಿಕಾ ಕಾರ್ಯಕ್ರಮಕ್ಕೆ ತಾಲ್ಲೂಕಿನ ತೆರಕನಹಳ್ಳಿಯಲ್ಲಿ ಶನಿವಾರ ಚಾಲನೆ ನೀಡಿ ಣವರು ಮಾತನಾಡಿದರು. ಏಪ್ರಿಲ್ 26 ರಿಂದ ಜೂನ್ 4 ರವರೆಗೆ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆ ವರೆಗೆ ಪ್ರತಿ ಮನೆಗೆ ಭೇಟಿ ನೀಡಿ, ಎಫ್‍ಎಂಡಿ ಲಸಿಕೆ ನೀಡಲಾಗುತ್ತದೆ. ಚರ್ಮಗಂಟು ರೋಗ ನಿಯಂತ್ರಣದ ಎಲ್‍ಎಸ್‍ಡಿ ಲಸಿಕೆಯನ್ನೂ ನೀಡಲಾಗುತ್ತದೆ ಎಂದರು.
ಎಲ್ಲಾ ರೈತರು ತಮ್ಮ ತಮ್ಮ ಜಾನುವಾರುಗಳಿಗೆ ತಪ್ಪದೇ ಎರಡೂ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳುವುದು. ತಾಲೂಕಿನಲ್ಲಿ ಲಸಿಕೆದಾರರು ಎಲ್ಲಾ ಮನೆಗಳಿಗೆ ಭೇಟಿ ನೀಡಿ ಉಚಿತವಾಗಿ ಲಸಿಕೆ ಹಾಕಲಿದ್ದಾರೆ ಎಂದು ತಿಳಿಸಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ ಇತರರಿದ್ದರು.
ಇದೇ ರೀತಿ ಸ್ವರ್ಣವಲ್ಲಿ ಮಠದಲ್ಲಿ ಕಾಲು ಬಾಯಿ ರೋಗ ಲಸಿಕೆ ಹಾಗೂ ದನಗಳಿಗೆ ಚರ್ಮಗಂಟು ರೋಗದ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.