ADVERTISEMENT

ಅಕ್ರಮ ಬೇಟೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:31 IST
Last Updated 12 ನವೆಂಬರ್ 2019, 16:31 IST
ಜಿಂಕೆಯನ್ನು ಭೇಟೆಯಾದಡಿದ ಬಂದಿತ ಆರೋಪಿಗಳೊಂದಿಗೆ ಅರಣ್ಯ ಇಲಾಖೆಯ ತಂಡ
ಜಿಂಕೆಯನ್ನು ಭೇಟೆಯಾದಡಿದ ಬಂದಿತ ಆರೋಪಿಗಳೊಂದಿಗೆ ಅರಣ್ಯ ಇಲಾಖೆಯ ತಂಡ   

ಸಿದ್ದಾಪುರ: ದುಬಾರೆ ಮೀಸಲು ಅರಣ್ಯದಲ್ಲಿ ಜಿಂಕೆಯೊಂದನ್ನು ಬೇಟೆಯಾಡಿದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಕುಶಾಲನಗರ ಅರಣ್ಯ ವ್ಯಾಪ್ತಿಯ ದುಬಾರೆ ಮೀಸಲು ಅರಣ್ಯದ ಆನೆಕೆರೆ ಎಂಬಲ್ಲಿಗೆ ಅಕ್ರಮವಾಗಿ ಪ್ರವೇಶಿಸಿದ ಮಾಲ್ದಾರೆ ಗ್ರಾಮದ ಹಣ್ಣಿನ ತೋಟದ ನಿವಾಸಿಗಳಾದ ಸಿದ್ಧ (40), ರವಿ (28), ಪ್ರಕಾಶ (26 ಹಾಗೂ ಅಣ್ಣಯ್ಯ (29) ಎಂಬವರು ಜಿಂಕೆಯೊಂದನ್ನು ಬೇಟೆಯಾಡಿ ಮಾಂಸ ಮಾಡಿ ಮನೆಯಲ್ಲಿ ಇರಿಸಲಾಗಿದೆ ಎನ್ನಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಜಿಂಕೆಯ ಕೊಂಬು, ಮಾಂಸದೊಂದಿಗೆ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ADVERTISEMENT

ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗ ಡಿ.ಸಿ.ಎಫ್ ಪ್ರಭಾಕರ್ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಗೂಳಿ, ಸಿಬ್ಬಂದಿ ಮಣಿಕಂಠ ಸೇರಿದಂತೆ ಆರ್.ಆರ್.ಟಿ ಸಿಬ್ಬಂದಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.