ADVERTISEMENT

ಜಾಜಿಗುಡ್ಡೆ ಭೂಕುಸಿತ ಪ್ರದೇಶಕ್ಕೆ ವಿಜ್ಞಾನಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 14:14 IST
Last Updated 11 ಆಗಸ್ಟ್ 2022, 14:14 IST
ಶಿರಸಿ ತಾಲ್ಲೂಕಿನ ಜಾಜಿಗುಡ್ಡೆ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ಕೇಂದ್ರದ ಸರ್ಕಾರದ ಭೂವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಿತು
ಶಿರಸಿ ತಾಲ್ಲೂಕಿನ ಜಾಜಿಗುಡ್ಡೆ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ಕೇಂದ್ರದ ಸರ್ಕಾರದ ಭೂವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಿತು   

ಶಿರಸಿ: ಕಳೆದ ಎರಡು ವರ್ಷಗಳಿಂದ ನಿರಂತರ ಭೂಕುಸಿತ ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕಿನ ಜಾಜಿಗುಡ್ಡೆ ಗ್ರಾಮಕ್ಕೆ ಕೇಂದ್ರದ ಇಬ್ಬರು ಭೂವಿಜ್ಞಾನಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಕೇಂದ್ರೀಯ ವಿಪತ್ತು ನಿರ್ವಹಣಾ ಸಮಿತಿಯ ಅಡಿ ಕಾರ್ಯನಿರ್ವಹಿಸುತ್ತಿರುವ ಭೂವಿಜ್ಞಾನಿಗಳಾದ ಕಪಿಲ್ ವಿರ್ಮಾ ಮತ್ತು ಜಿಲಾನಿ ಕುಸಿತ ಉಂಟಾಗಿರುವ ಜಾಗ, ಅದರ ಸುತ್ತಮುತ್ತಲಿನ 200 ಮೀ. ವ್ಯಾಪ್ತಿ ಪ್ರದೇಶದಲ್ಲಿ ಪರೀಕ್ಷೆ ಕೈಗೊಂಡರು. ಕಳೆದ ವರ್ಷ ಕೂಡ ಇಬ್ಬರು ವಿಜ್ಞಾನಿಗಳ ತಂಡ ಈ ಪ್ರದೇಶದಲ್ಲಿ ಅಧ್ಯಯನ ನಡೆಸಿತ್ತು.

‘ವಿಜ್ಞಾನಿಗಳು ಕುಸಿತ ಉಂಟಾದ ಪ್ರದೇಶದ ಮಣ್ಣು, ಕಲ್ಲು ಪರೀಕ್ಷೆ ನಡೆಸಿದ್ದಾರೆ. ಸ್ಥಳೀಯ ಜನರಿಂದ ಅಭಿಪ್ರಾಯವನ್ನೂ ಸಂಗ್ರಹಿಸಿದೆ. ತಂಡಕ್ಕೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ’ಎಂದುಕಂದಾಯಇಲಾಖೆಅಧಿಕಾರಿಗಳುತಿಳಿಸಿದ್ದಾರೆ.ಉಪತಹಶೀಲ್ದಾರ್ಡಿ.ಆರ್.ಬೆಳ್ಳೆಮನೆ,ಸಿಬ್ಬಂದಿತಂಡದಜತೆಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.