ಹೊನ್ನಾವರ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಮಳೆಯ ರಭಸಕ್ಕೆ ತಾಲ್ಲೂಕಿನ ಹಳ್ಳ-ಕೊಳ್ಳ, ನದಿಗಳಿಗೆ ಜೀವಕಳೆ ಬಂದಿದೆ.
ಮುಂಗಾರು ವಿಳಂಬವಾಗಿದ್ದರಿಂದ ಹೆಚ್ಚಿನ ಹಳ್ಳಗಳು ಬತ್ತಿ ಹೋಗಿದ್ದವು. ನದಿಗಳಲ್ಲೂ ನೀರಿನ ಮಟ್ಟ ಕೆಳಗಿಳಿದಿತ್ತು. ಇದೀಗ ಮಳೆಯಾಗುತ್ತಿರುವ ಕಾರಣ ಮತ್ತೆ ನೀರಿನ ಮಟ್ಟ ಮೊದಲಿನ ಸ್ಥಿತಿಗೆ ಮರಳುತ್ತಿದೆ.
ಗುಂಡಬಾಳ ನದಿಯಲ್ಲಿ ಸಾಮಾನ್ಯವಾಗಿ ಮಳೆಗಾಲ ಆರಂಭವಾಗಿ ಕೆಲವು ದಿನಗಳ ನಂತರ ನಡೆಯುತ್ತಿದ್ದ ದೋಣಿ ಸ್ಪರ್ಧೆಗಳು ಈ ವರ್ಷ ಮುಂಗಾರು ವಿಳಂಬವಾಗಿರುವುದರಿಂದ ಮಳೆಗಾಲದ ಆರಂಭದಲ್ಲೇ ನಡೆಯುವಂತಾಯಿತು. ಗುಂಡಬಾಳ ಹಾಗೂ ಹಡಿನಬಾಳದಲ್ಲಿ ಶುಕ್ರವಾರ ದೋಣಿ ಸ್ಪರ್ಧೆಗಳು ನಡೆದವು. ಹಡಿನಬಾಳದಲ್ಲಿ ನಡೆದ ದೋಣಿ ಸ್ಪರ್ಧೆಯಲ್ಲಿ 8 ತಂಡಗಳು ಭಾಗವಹಿಸಿದ್ದವು. ಮರಿಯಾನ್ ಮಿರಾಂಡಾ ತಂಡ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.